* ಆಸಿಯಾನ್ ಶೃಂಗ ಸಭೆಯು ಆಗ್ನೇಯ ಏಷ್ಯದ ರಾಷ್ಟ್ರಗಳ ಸಂಘ ಸರ್ವೋಚ್ಛ ನೀತಿ - ನಿರ್ಮಾಣ ಸಂಸ್ಥೆಯಾಗಿದ್ದು,ಅದರ ಸದಸ್ಯ ರಾಷ್ಟ್ರಗಳ ನಾಯಕರನ್ನು ಒಂದುಗೂಡಿಸುತ್ತದೆ.ಇದು ಸಾಮಾನ್ಯವಾಗಿ ವಾರ್ಷಿಕವಾಗಿ ಎರಡು ಬಾರಿ ನಡೆಯುತ್ತದೆ.* ಅಕ್ಟೋಬರ್ 27 ರಿಂದ ಮಲೇಷಿಯಾದ ಕೌಲಾಲಂಪುರದಲ್ಲಿ ಆಸಿಯಾನ್ ಶೃಂಗ ಸಭೆ ನಡೆಯಲಿದೆ.ಈ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರು ವರ್ಚುವಲ್ ಆಗಿ ಭಾಗಿಯಾಗಲಿದ್ದಾರೆ.* ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸದಸ್ಯ ರಾಷ್ಟ್ರಗಳಿಗೆ ಅವಕಾಶ ಕಲ್ಪಿಸುವುದು ಈ ಸಂಘಟನೆಯ ಉದ್ದೇಶವಾಗಿದೆ.* ಸದಸ್ಯ ರಾಷ್ಟ್ರಗಳ ಭೂಪ್ರದೇಶದಲ್ಲಿ ಶಾಂತಿ ಸ್ಥಾಪನೆ,ಸ್ಥಿರತೆಯ ರಕ್ಷಣೆ,ವ್ಯಾಪಾರ,ಸಾಮಾಜಿಕ,ಸಾಂಸ್ಕೃತಿಕ ಅಭಿವೃದ್ಧಿ ಈ ಸಂಘಟನೆಯ ಗುರಿಯಾಗಿದೆ.* ಭಾರತ ಈ ಸಂಘಟನೆಯ ಸದಸ್ಯತ್ವ ಪಡೆದಿಲ್ಲ.ಬದಲಿಗೆ,1992 ರಲ್ಲಿ ವಲಯ ಸಹಭಾಗಿತ್ವವನ್ನು ಭಾರತಕ್ಕೆ ನೀಡಲಾಗಿದೆ.* ಭಾರತ ಮತ್ತು ಆಸಿಯಾನ್ ದೇಶಗಳ ಒಟ್ಟು ಜನಸಂಖ್ಯೆ 185 ಕೋಟಿಗೂ ಅಧಿಕವಾಗಿದೆ.* 1987 ರಲ್ಲಿ ಇಂಡೋನೇಷ್ಯಾ,ಮಲೇಷಿಯಾ,ಫಿಲಿಪ್ಪಿನ್ಸ,ಸಿಂಗಾಪುರ ಈ ಸಂಘಟನೆಯನ್ನು ಸ್ಥಾಪಿಸಿವೆ.* ಬ್ರುನೈ,ಮ್ಯಾನ್ಮಾರ,ಕಾಂಬೋಡಿಯಾ,ಲಾವೊಸ ಈ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿವೆ.* ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಶೇ.10 ರಷ್ಟುಮೊತ್ತದ ಮೂಲ ಆಸಿಯಾನ್ ರಾಷ್ಟ್ರಗಳು.