* ದಾಖಲಾತಿಯೇ ಇಲ್ಲದ ಶಾಲೆಗಳು,ದಾಖಲಾತಿ ಇದ್ದರು ಒಬ್ಬರೇ ಶಿಕ್ಷಕರು ಇರುವ ಸಮಸ್ಯೆ,ಒಬ್ಬರೇ ಶಿಕ್ಷಕರ ಮೇಲೆ ಹಲವಾರು ವಿದ್ಯಾರ್ಥಿಗಳ ಹೊರೆ,ಈ ಸಮಸ್ಯೆಗಳ ನಿವಾರಣೆಯಲ್ಲಿ ಕರ್ನಾಟಕ 2024 - 25 ರ ಸಾಲಿನಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ.* ರಾಷ್ರ್ಟ ಮಟ್ಟದಲ್ಲಿಯೂ,ರಾಜ್ಯದಲ್ಲಿಯೂ ಶಾಲಾ ದಾಖಲಾತಿಯು ಸಂಖ್ಯೆ ಈ ಬಾರಿ ತುಸು ಕಡಿಮೆ.ಆದರೆ,2023 - 24 ರ ಸಾಲಿಗೆ ಹೋಲಿಸಿದರೆ ಹಲವು ಸುಧಾರಣೆಗಳಿವೆ.* 2023 - 24 ನೇ ಸಾಲಿನಲ್ಲಿ ದಾಖಲಾತಿಯೇ ಆಗದ ಒಟ್ಟು 12,954 ಶಾಲೆಗಳಿದ್ದವು,ಅಂತೆಯೇ ಈ ಶಾಲೆಗಳಲ್ಲಿ 31,981 ಶಿಕ್ಷಕರಿದ್ದರು.* ದಾಖಲಾತಿ ಆಗದ ಶಾಲೆಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.ಜೊತೆಗೆ,ಒಬ್ಬರೇ ಶಿಕ್ಷಕರು ಇರುವ ಶಾಲೆಗಳ ಸಂಖ್ಯೆ ಇಳಿಕೆ ಆಗಿದೆ.ರಾಜ್ಯದ ಒಬ್ಬ ಶಿಕ್ಷಕರಿಗೆ ಸರಾಸರಿ ವಿದ್ಯಾರ್ಥಿಗಳ ಸಂಖ್ಯೆ ಈಗ 26 ಇದೆ.* ಏಕ ಶಿಕ್ಷಕ ಶಾಲೆ:ಸಂಖ್ಯೆ ಇಳಿಕೆ :-* 2024 - 25 ರಲ್ಲಿ ಒಬ್ಬರೇ ಶಿಕ್ಷಕರು ಇರುವ ಒಟ್ಟು ಶಾಲೆಗಳ ಸಂಖ್ಯೆ 1 ಲಕ್ಷ.* 2024 - 25 ರಲ್ಲಿ ಒಬ್ಬರೇ ಶಿಕ್ಷಕರು ಇರುವ ಶಾಲೆಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ 33 .76 ಲಕ್ಷ.* 2023 - 24 ರಲ್ಲಿ ಒಬ್ಬರೇ ಶಿಕ್ಷಕರು ಇರುವ ಶಾಲೆಗಳಲ್ಲಿ 39 .9 ಲಕ್ಷ ಮಕ್ಕಳು ದಾಖಲಾಗಿದ್ದರು.ಜೊತೆಗೆ,ಒಬ್ಬರೇ ಶಿಕ್ಷಕರು ಇರುವ ಶಾಲೆಗಳ ಸಂಖ್ಯೆ ಈಗ 6,846 ಕ್ಕೆ ಇಳಿಕೆಯಾಗಿದೆ.