* ಭಾರತೀಯ ನೌಕಾಪಡೆಯ ಅಧಿಕಾರಿಗಳಾದ ಲೆಫ್ಟಿನೆಂಟ್‌ ಕಮಾಂಡರ್ ದಿಲ್ನಾ ಕೆ ಹಾಗೂ ರೂಪಾ ಎ ಪೆಸಿಫಿಕ್‌ ಸಾಗರದ ದಕ್ಷಿಣದಲ್ಲಿನ ‘ಪಾಯಿಂಟ್‌ ನೆಮೊ’ ಅನ್ನು ಗುರುವಾರ(ಜನವರಿ.30) ದಾಟುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.* ಇದು ಭೂಮಿಯ ದಕ್ಷಿಣ ಗೋಳಾರ್ಧದಲ್ಲಿರುವ ಅತ್ಯಂತ ದೂರದ ಸ್ಥಳವಾಗಿದ್ದು, ‘ಪಾಯಿಂಟ್‌ ನೆಮೊ’ದಿಂದ ಹತ್ತಿರದ ಭೂಪ್ರದೇಶಕ್ಕೆ ಇರುವ ದೂರ 2,688 ಕಿ.ಮೀ. ‘ನಾವಿಕ ಸಾಗರ ಪರಿಕ್ರಮ–2’ ಭಾಗವಾಗಿ ಈ ಇಬ್ಬರು ಮಹಿಳಾ ಅಧಿಕಾರಿಗಳು ನೌಕೆ ‘ಐಎನ್‌ಎಸ್‌ INSV Tarini ತಾರಿಣಿ’ಯಲ್ಲಿ ಪರ್ಯಟನೆ ಕೈಗೊಂಡಿದ್ದಾರೆ.* ನ್ಯೂಜಿಲೆಂಡ್‌ನ ಲಿಟೆಲ್ಟನ್‌ನಿಂದ ಫಾಕ್‌ಲ್ಯಾಂಡ್ ದ್ವೀಪಗಳಲ್ಲಿನ ಪೋರ್ಟ್‌ ಸ್ಟ್ಯಾನ್ಲೆಗೆ ಸಾಗುವ ವೇಳೆ, ಜನವರಿ 30ರಂದು ರಾತ್ರಿ 12.30ಕ್ಕೆ ಇವರು ‘ಪಾಯಿಂಟ್‌ ನೆಮೊ’ವನ್ನು ಯಶಸ್ವಿಯಾಗಿ ದಾಟಿದರು.* ಇದು, ಭಾರತೀಯ ನೌಕಾಪಡೆಯು ಮಹಿಳಾ ಅಧಿಕಾರಿಗಳೇ ಇರುವ ತಂಡ ಕೈಗೊಂಡಿರುವ ಎರಡನೇ ಭೂಪ್ರದಕ್ಷಿಣೆಯಾಗಿದೆ. ಮೊದಲ ಪರ್ಯಟನೆಗೂ ಐಎನ್‌ಎಸ್‌ ತಾರಿಣಿ ಬಳಸಲಾಗಿತ್ತು.