Job Description: ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ( PM Gati Shakti Master Plan ) ಯೋಜನೆಯ ಅಡಿಯಲ್ಲಿ, ಸಾರ್ವಜನಿಕ ಖಾಸಗಿ ಸಹಭಾಗಿತ್ವದ ( public private partnership model ) ಮಾದರಿಯಲ್ಲಿ 150 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ " ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ " (Multi Modal Linguistic Park - MMLP ) ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಮೈಲಿಗಲ್ಲನ್ನು ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು M/s ಜೊತೆಗೆ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ.ಮಹತ್ವ - Significance ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಮಾದರಿಯ ಮಹಾರಾಷ್ಟ್ರ ರಾಜ್ಯದಲ್ಲಿಯೆ ಪ್ರಥಮವಾಗಿದೆ.MMLP ಯು ಮೂರು ಹಂತದಲ್ಲಿ ನಿರ್ಮಾಣವಾಗುತ್ತಿದ್ದು, ಮೊದಲನೆಯ ಹಂತದಲ್ಲಿ 137 ಕೋಟಿ ಹೂಡಿಕೆಯೊಂದಿಗೆ ಎರಡು ವರ್ಷದಲ್ಲಿ ಪೂರ್ಣಗೊಳ್ಳುವ ನೀರಿಕ್ಷೆ ಇದೆ. ಇದರ ನಿರ್ಮಾಣದಿಂದ ದೇಶದ ಮೂಲ ಸೌಕರ್ಯ ಬೆಳವಣಿಗೆಗೆ ಮತ್ತು ಕೈಗಾರಿಕಾ ವಲಯಗಳನ್ನು ಉತ್ತೇಜಿಸಲು ಸಹಾಯಕವಾಗಿದೆ. ನಿರ್ಮಾಣವಾಗುತ್ತಿರುವ ಸ್ಥಳ :MMLP ಯು ಮಹಾರಾಷ್ಟ್ರ ರಾಜ್ಯದ ವಾಧಾ ಜಿಲ್ಲೆಯ ಸಿಂಧಿಯ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿದ್ದು, ನಾಗಪುರ ರೈಲ್ವೆ ನಿಲ್ದಾಣದಿಂದ 56KM ಮತ್ತು ನಾಗಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 48KM ದೂರದಲ್ಲಿದೆ.ಯಾರ ಯಾರ ಸಹಬಾಗಿತ್ವ ಒಳಗೊಂಡಿದೆ? ಈ ಯೋಜನೆಯು NHAI ( National Highway Authority of India ) ಮತ್ತು JNPA ( Jawaharlal Nehru Port Authority ) ಯವರ ಸಹಯೋಗದಲ್ಲಿದೆ. ಈ ಯೋಜನೆಗೆ NHLML ಸಂಸ್ಥೆಯವರು ಬಾಹ್ಯ ರೈಲು, ರಸ್ತೆ ಸಂಪರ್ಕದ ಜೊತೆಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಒದಗಿಸಲಿದ್ದಾರೆ.MMLP ಉದ್ದೇಶಗಳು : ಈ ಯೋಜನೆಯು ಗಣನೀಯ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಮತ್ತು ಆ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. MMLP ನಿರ್ಮಾಣವು ಗೋದಾಮುಗಳು, ಕೋಲ್ಡ್ ಸ್ಟೋರೇಜ್ ಗಳು, ಇಂಟರ್ ಮಾಡೆಲ್ ವರ್ಗಾವಣೆಗಳು, ಕಂಟೇನರ್ ಟರ್ಮಿನಲ್ ಗಳು ಮತ್ತು ಬಲ್ಕ್ /ಬ್ರೇಕ್ ಬಲ್ಕ್ ಸೇರಿದಂತೆ ವೈವಿಧ್ಯಮಯ ಸೌಲಭ್ಯಗಳನ್ನು ಒಳಗೊಂಡಿದೆ.ಭಾರತೀಯ ಲಾಜಿಸ್ಟಿಕ್ ಕ್ಷೇತ್ರದ ಮೇಲೆ ಪರಿಣಾಮ : ಈ ಒಂದು ಅಭಿವೃದ್ಧಿಯು ದೇಶದ ಸರಕು ಸಾಗಾಣೆ ವಲಯದ ಮೌಲ್ಯವನ್ನು ಹೆಚ್ಚಿಸಲಿದೆ.