* ದೇಶದಲ್ಲಿ 2025ರ ಅಕ್ಟೋಬರ್‌ 1ರಿಂದ ತಯಾರಾಗುವ ಎಲ್ಲ ಟ್ರಕ್‌ಗಳ ಚಾಲಕರ ಕ್ಯಾಬಿನ್‌ ಕಡ್ಡಾಯವಾಗಿ ಹವಾ ನಿಯಂತ್ರಿತ ಆಗಿರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.* ಚಾಲಕರು ಅತಿಯಾದ ತಾಪಮಾನದಲ್ಲಿ ಟ್ರಕ್‌ಗಳನ್ನು ಚಲಾಯಿಸುತ್ತಾರೆ. ಹಾಗಾಗಿ, ಅವರ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ.* ಟ್ರಕ್‌ಗಳಲ್ಲಿ 3.5 ಟನ್‌ನಿಂದ 12 ಟನ್‌ನಷ್ಟು ಸರಕು ಸಾಗಣೆ ಮಾಡುವ ವಾಹನಗಳು (ಎನ್2) ಹಾಗೂ 12 ಟನ್‌ ಗೂ ಹೆಚ್ಚು ಸರಕು ಸಾಗಣೆ ಮಾಡುವ ವಾಹನಗಳಿಗೆ (ಎನ್3) ಈ ನಿಯಮ ಅನ್ವಯಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.* ಎಸಿ ಕ್ಯಾಬಿನ್‌ಗಳು ಉತ್ತಮ ಚಾಲನಾ ಅನುಭವವನ್ನು ನೀಡುವುದಷ್ಟೇ ಅಲ್ಲದೇ ಚಾಲಕರ ಆರೋಗ್ಯ ಸುಧಾರಿಸುವುದಕ್ಕೂ ಸಹಾಯ ಮಾಡಲಿದೆ. ಅಲ್ಲದೇ ಇದು ಹೆದ್ದಾರಿಗಳಲ್ಲಿ ಆಗುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಸಹಾಯಮಾಡಲಿದೆ ಎಂದು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.