* ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರವು ದೇಶದ ಎಲ್ಲ ಯುವಕ ಮತ್ತು ಯುವತಿಯರು ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.* 18 ರಿಂದ 35 ವರ್ಷ ವಯಸ್ಸಿನ ಯುವಕರು ಮತ್ತು 18 ರಿಂದ 27 ವರ್ಷ ವಯಸ್ಸಿನ ಯುವತಿಯರು 2 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು.* 45 ವರ್ಷ ವಯಸ್ಸಿನವರೆಗಿನ ವೈದ್ಯರು ಮುಂತಾದ ಪರಿಣತರು ಮೂರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗಿದೆ.* ದೇಶವನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸೈನಿಕರದಲ್ಲ, ಪ್ರತಿಯೊಬ್ಬ ನಾಗರಿಕನದ್ದು, ಹಾಗಾಗಿ ಎಲ್ಲರು ನಾಗರೀಕ ಸೇನಾ ಸೇವಾ ಕಾನೂನನ್ನು ಹೆಮ್ಮೆಯಿಂದ ಪಾಲಿಸಬೇಕು ಎಂದು ಮಿಲಿಟರಿ ಸರ್ಕಾರದ ವಕ್ತಾರ ಝಾ ಮಿನ ಟುನ್ ಅವರು ತಿಳಿಸಿದ್ದಾರೆ.* 2021 ರಿಂದ ಸೇನೆ ನಿಯಂತ್ರಣದಲ್ಲಿರುವ ಮ್ಯಾನ್ಮಾರ್‌ ನಲ್ಲಿ ಯೋಧರ ಕೊರೆತ ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ಹೊಸ ಕಾನೂನನ್ನು ರೂಪಿಸಿದೆ.