* ಅಸ್ಸಾಂನ ಪಾಕಪದ್ಧತಿಯ ಅವಿಭಾಜ್ಯ ಭಾಗವಾಗಿರುವ 'ಕಾಜಿ ನೀಮು'(ಸಿಟ್ರಸ್‌‌ ಲೆಮನ್‌) ಹಣ್ಣನ್ನು 'ರಾಜ್ಯ ಹಣ್ಣು' ಎಂದು ಅಸ್ಸಾಂ ಸರ್ಕಾರ ಮಂಗಳವಾರ (13/02/2024) ಘೋಷಿಸಿದೆ. * ನಿಂಬೆ ಜಾತಿಗೆ ಸೇರಿದ 'ಕಾಜಿ ನೀಮು' ಅಸ್ಸಾಂನಲ್ಲಿ ಸಿಗುವ ಒಂದು ವಿಶೇಷ ಫಲವಾಗಿದೆ. ತನ್ನ ವಿಶಿಷ್ಟ ಸ್ವಾದ ಮತ್ತು ಔಷಧಿಯ ಗುಣಗಳಿಂದ ರಾಜ್ಯದಾದ್ಯಂತ ಹೆಚ್ಚು ಬಳಕೆಯಲ್ಲಿದೆ.* 2016ರಲ್ಲಿ ಭೌಗೋಳಿಕ ಗುರುತಿನ ಸ್ಥಾನಮಾನವನ್ನು(ಜಿಐ ಟ್ಯಾಗ್‌) ಈ ಹಣ್ಣಿಗೆ ನೀಡಲಾಗಿತ್ತು. ಆಂಗ್ಲ ಭಾಷೆಯಲ್ಲಿ ಸಿಟ್ರಸ್‌ ಲೆಮನ್‌ ಎಂದು ಕರೆಯುವ ಈ ಕಾಜಿ ನೀಮು ಅಸ್ಸಾಂನ ಪ್ರಮುಖ ಬೆಳೆಯಾಗಿದೆ.* ಈ ಹಣ್ಣು ನೋಡಲು ಗಜನಿಂಬೆ ಹಣ್ಣಿನ ರೀತಿ ಕಾಣುವ ಕಾಜಿ ನೀಮು, ಆಹಾರ ಖಾದ್ಯಗಳಿಗೆ ವಿಶೇಷ ರುಚಿ ನೀಡಲಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ.