* ಭಾರತದ ಗಾನ ಕೋಗಿಲೆ ಎಂದೇ ಗುರುತಿಸಿಕೊಂಡಿದ್ದ ಸರೋಜಿನಿ ನಾಯ್ದು ಅವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಹೆಸರಾಂತ ಕವಿಯಾಗಿ, ರಾಜಕೀಯ ನಾಯಕಿಯಾಗಿ ಪ್ರಸಿದ್ಧಿ ಗಳಿಸಿದವರು. ಪ್ರತಿವರ್ಷ ಅವರ ಜನ್ಮದಿನವಾದ ಫೆಬ್ರವರಿ 13 ರಂದು ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ.* ಸರೋಜಿನಿ ನಾಯ್ಡು ಅವರು ಫೆಬ್ರವರಿ 13, 1879 ರಲ್ಲಿ ಆಂಧ್ರಪ್ರದೇಶದ ಹೈದರಾಬಾದ್ನಲ್ಲಿ ಜನಿಸಿದರು. ಇವರ ತಂದೆ ಅಗೋರೆನಾಥ್ ಚಟ್ಟೋಪಾಧ್ಯಾಯರು, ತಾಯಿ ಸುಂದರಿದೇವಿ. ಇವರ ತಂದೆ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದರು.* ಸರೋಜಿನಿ ನಾಯ್ಡು ಅವರು ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳನ್ನು ಮಾತನಾಡುತ್ತಿದ್ದರು. ಮನೆಯಲ್ಲಿ ಇವರು ಗಣತಜ್ಞೆ ಅಥವಾ ವಿಜ್ಞಾನಿ ಆಗಲಿ ಎಂಬ ಬಯಕೆ ಇದ್ದರೆ, ಅವರು ಕವಿಯಾಗಲು ಇಚ್ಛಿಸಿದ್ದರು. ಇವರು ಆಂಗ್ಲಭಾಷೆಯಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಹೈದರಾಬಾದಿನ ನಿಜಾಮರು ಇವರ ಕವಿತೆಗಳಿಂದ ಸ್ಪೂರ್ತಿಗೊಂಡು ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿವೇತನವನ್ನು ನೀಡಿದರು.* ನಾಯ್ಡು ಅವರು 1925ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.  ಮಹಾತ್ಮ ಗಾಂಧಿಯವರ ನಿಕಟ ಸಹವರ್ತಿಯಾಗಿದ್ದು, ಬ್ರಿಟಿಷ್ ಆಡಳಿತದ ವಿರುದ್ಧ ಅಹಿಂಸಾತ್ಮಕ ಪ್ರತಿರೋಧ ಚಳವಳಿಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.* ಸರೋಜಿನಿ ನಾಯ್ಡು ಅವರನ್ನು "ನೈಟಿಂಗಲ್ ಆಫ್ ಇಂಡಿಯಾ" ಅಥವಾ "ಭಾರತದ ಕೋಗಿಲೆ" ಎಂದು ಕರೆಯಲಾಗುತ್ತಿತ್ತು.* ಭಾರತದ ರಾಜ್ಯವಾದ ಉತ್ತರ ಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. *  ಸರೋಜಿನಿ ನಾಯ್ಡು ಭಾರತೀಯ ಸಮಾಜ ಮತ್ತು ರಾಜಕೀಯಕ್ಕೆ ನೀಡಿದ ಕೊಡುಗೆಯಿಂದಾಗಿ ಭಾರತ ಸರ್ಕಾರವು 1975 ರಲ್ಲಿ ಫೆಬ್ರವರಿ 13 ಅನ್ನು ರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು.* ರಾಷ್ಟ್ರೀಯ ಮಹಿಳಾ ದಿನಾಚರಣೆಯು ದೇಶವು ಮಹಿಳೆಯರ ಸಾಧನೆಗಳನ್ನು ಸಂಭ್ರಮಿಸಲು ಮತ್ತು ಅವರ ಸಾಮರ್ಥ್ಯಗಳನ್ನು ಗುರುತಿಸಲು ಅವಕಾಶವನ್ನು ಒದಗಿಸುತ್ತದೆ.