* ಬ್ರಿಟನ್‌ನಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ ವರ್ಷಗಳಿಂದ ಸ್ಥಗಿತಗೊಂಡಿರುವ ಪ್ರಮುಖ ವ್ಯಾಪಾರ ಒಪ್ಪಂದವಾದ ಯುಕೆ-ಭಾರತ ಮುಕ್ತ ವ್ಯಾಪಾರ ಒಪ್ಪಂದವು ಅಂತಿಮವಾಗಿ 2025 ರ ಆರಂಭದಲ್ಲಿ ಮರುಪ್ರಾರಂಭಿಸಲು ಸಿದ್ಧವಾಗಿದೆ.* ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ(ಎಫ್‌ಟಿಎ) ಬಗ್ಗೆ ಮುಂದಿನ ವರ್ಷ (2025) ಮಾತುಕತೆ ನಡೆಯುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.* ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಬ್ರಿಟನ್ ಪ್ರಧಾನಿ ಸ್ವಾರ್ಮರ್ ಕಿಯರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾರತ-ಬ್ರಿಟನ್ ಮಾತುಕತೆ ನಡೆಸಿದರು ದ್ವಿಪಕ್ಷೀಯ ಮಾತುಕತೆ ನಡೆಸಿದರು.* ಈ ವೇಳೆ ಮಾತನಾಡಿದ ಕಿಯರ್ ಸ್ವಾರ್ಮರ್ ಅವರು, ಎಫ್‌ಟಿಎ ಕುರಿತ ಸಮಾಲೋಚನೆಗಳಿಗೆ ಮುಂದಿನ ವರ್ಷ ಮತ್ತೆ ಚಾಲನೆ ನೀಡಲಾಗುವುದು.* ಎಫ್‌ಟಿಎ ಕುರಿತಾದ ಮಾತುಕತೆ ನಡೆಸುವ ದಿನಾಂಕವನ್ನು ರಾಜತಾಂತ್ರಿಕ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ.* ಬ್ರಿಟನ್ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತು ಭದ್ರತೆ, ಶಿಕ್ಷಣ, ತಂತ್ರಜ್ಞಾನ ಮತ್ತು ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಆಳವಾದ ಸಹಕಾರವನ್ನು ಬಯಸುತ್ತಿದೆ ಎಂದು ಸ್ಟಾರ್ಮರ್ ಸ್ಪಷ್ಟವಾಗಿ ಒತ್ತಿಹೇಳಿದ್ದಾರೆ.* 'ಮುಕ್ತ ವ್ಯಾಪಾರ ಮಾತ್ರವಲ್ಲದೇ, ಭದ್ರತೆ, ಶಿಕ್ಷಣ, ತಂತ್ರಜ್ಞಾನ ಮತ್ತು ಹವಾಮಾನ ಬದಲಾವಣೆ ಕ್ಷೇತ್ರಗಳಲ್ಲಿ ಭಾರತದೊಂದಿಗಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಬ್ರಿಟನ್ ಉತ್ಸುಕವಾಗಿದೆ' ಎಂದು ಪ್ರಧಾನಿ ಸ್ವಾರ್ಮರ್ ಅವರ ಕಚೇರಿ ಹೇಳಿದೆ.* ಭಾರತದ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿಗಳಾದ ವಿಜಯ್ ಮಲ್ಯಾ ಹಾಗೂ ನೀರವ್ ಮೋದಿ ಅವರನ್ನು ಹಸ್ತಾಂತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರನ್ನು ಒತ್ತಾಯಿಸಿದ್ದಾರೆ.