* ದಕ್ಷಿಣ ಭಾರತದ ಪಶ್ಚಿಮ ಹಾಗೂ ಪೂರ್ವ ಘಟ್ಟ ಶ್ರೇಣಿಗಳಲ್ಲಿ ಕಾಣಸಿಗುವ ಕಾಳಿಂಗ ಸರ್ಪದ ಪ್ರಭೇದಕ್ಕೆ ಇನ್ನು ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಳಿಂಗ' ಎಂದೇ ಸಂಬೋಧಿಸಲಾಗುತ್ತದೆ' ಎಂದು ಉರಗ ತಜ್ಞ ಡಾ.ಪಿ.ಗೌರಿಶಂಕರ್ ಅವರು ತಿಳಿಸಿದ್ದಾರೆ.* ಪ್ರಪಂಚದಾದ್ಯಂತ ಕಾಳಿಂಗ ಸರ್ಪದ ಒಂದೇ ಪ್ರಭೇದ ಇಲ್ಲ. ಬದಲಿಗೆ ನಾಲ್ಕು ಪ್ರಭೇದಗಳಿವೆ ಎಂಬುದನ್ನು ಇಲ್ಲಿನ ಆಗುಂಬೆಯ ವನ್ಯಜೀವಿ, ಉರಗ ತಜ್ಞರ ತಂಡ ಪತ್ತೆ ಮಾಡಿದೆ.* ಅದರಲ್ಲಿ ದಕ್ಷಿಣ ಭಾರತದಲ್ಲಿ ಕಾಣಸಿಗುವ ಪ್ರಭೇದಕ್ಕೆ ಈ ಭಾಗದಲ್ಲಿ ಬಳಕೆಯಲ್ಲಿರುವ 'ಕಾಳಿಂಗ' ಎಂಬ ಹೆಸರನ್ನೇ ವೈಜ್ಞಾನಿಕವಾಗಿ ನಾಮಕರಣ ಮಾಡಿದೆ.* 436 'ಉರಗ ತಜ್ಞ ಕ್ಯಾಂಟರ್ 1836ರಲ್ಲಿ ಈ ಉರಗ ದೈತ್ಯನ ಪ್ರಭೇದವನ್ನು ಮೊದಲ ಬಾರಿಗೆ ಗುರುತಿಸಿದ್ದರು. ಆಗಿನಿಂದ ಅದಕ್ಕೆ ಒಪಿಪಿಗಸ್ ಅನ್ಹಾ (Ophiophagus hannah) ವೈಜ್ಞಾನಿಕ ಹೆಸರು ಇದೆ. ಅಂದಿನಿಂದ ಜಗತ್ತಿನಲ್ಲಿ ಒಂದೇ ಪ್ರಭೇದದ ಕಾಳಿಂಗ ಸರ್ಪ ಮಾತ್ರ ಇದೆ ಎಂದು ನಂಬಲಾಗಿತ್ತು.* 185 ವರ್ಷಗಳ ನಂತರ ಕಾಳಿಂಗ ಸರ್ಪಗಳ ನಾಲ್ಕು ಪ್ರಭೇದ ಇರುವುದು ಪತ್ತೆಯಾಗಿದೆ. ಇದಕ್ಕಾಗಿ 10 ವರ್ಷಗಳ ಕಾಲ ಕ್ಷೇತ್ರ ಅಧ್ಯಯನ ನಡೆಸಿದ್ದೇವೆ. ಡಿಎನ್‌ಎ ಪರೀಕ್ಷೆ ಹಾಗೂ ಅವುಗಳ ದೇಹದ ಮೇಲಿನ ಪಟ್ಟೆಗಳ ನೆರವು ಪಡೆದಿದ್ದೇವೆ' ಡಾ.ಪಿ.ಗೌರಿಶಂಕರ್ ಅವರು ತಿಳಿಸಿದ್ದಾರೆ.* ದಕ್ಷಿಣ ಭಾರತದ ಪಚ್ಚಿಮ ಹಾಗೂ ಪೂರ್ವ ಘಟ್ಟ ಶ್ರೇಣಿ, ಅಂಡಮಾನ್ ದ್ವೀಪ ಸಮೂಹದಲ್ಲಿ ಕಾಳಿಂಗದ ಒಂದು ಪ್ರಭೇದ ಕಾಣಸಿಕ್ಕಿದೆ.* ಉತ್ತರ ಭಾರತದ ಹಿಮಾಲಯ ಪರ್ವತ ಶ್ರೇಣಿಯಲ್ಲಿ, ಈಶಾನ್ಯ ಭಾರತ ಹಾಗೂ ದಕ್ಷಿಣ ಚೀನಾ ಭಾಗದಲ್ಲಿ ಮೂರನೇ ಪ್ರಭೇದ ಹಾಗೂ ಮ್ಯಾನ್ಮಾರ್, ಥಾಯ್ಲೆಂಡ್, ವಿಯಟ್ನಾಂ, ಮಲೇಷ್ಯಾ, ಸುಮಾತ್ರಾ, ಬೊರ್ನಿಯೊ, ಜಾವಾ, ಬಾಲಿ ದ್ವೀಪ ಸಮೂಹ, ಫಿಲಿಪ್ಪಿನ್ಸ್ ಭಾಗದಲ್ಲಿ ಕಾಳಿಂಗದ ನಾಲ್ಕನೇ ಪ್ರಭೇದ ಕಾಣಸಿಕ್ಕಿದೆ ಎಂದು ವಿವರಿಸಿದರು.