Job Description: * ಸುದೀರ್ಘ 16 ವರ್ಷಗಳ ಕಾಲ ಜರ್ಮನಿಯನ್ನು ಮುನ್ನಡೆಸಿದ ಮಾಜಿ ಚಾನ್ಸ್‌ಲರ್‌ ಅಂಗೆಲಾ ಮರ್ಕೆಲ್‌ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ 'ಆರ್ಡರ್‌ ಆಫ್‌ ಮೆರಿಟ್‌' ಅನ್ನು ನೀಡಿ ಗೌರವಿಸಲಾಗುತ್ತಿದೆ. ದೇಶಕ್ಕೆ ಮರ್ಕೆಲ್‌ ಅವರು ಸಲ್ಲಿಸಿದ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ.* 68 ವರ್ಷದ ಮರ್ಕೆಲ್‌ ಜರ್ಮನಿಯ ಅತ್ಯುನ್ನತ ಹುದ್ದೆಗೆ ಏರಿದ, ದೇಶವನ್ನು ಮುನ್ನಡೆಸಿದ ಮೊದಲ ಮಹಿಳೆಯಾಗಿದ್ದಾರೆ. ನಾಲ್ಕು ಬಾರಿ ದೇಶದ ಚಾನ್ಸ್‌ಲರ್‌ ಆಗಿ ಮರ್ಕೆಲ್‌ ಆಯ್ಕೆಯಾಗಿದ್ದರು* ಮರ್ಕೆಲ್‌ ಅವರು ದೇಶದ ಈ ಅತ್ಯುನ್ನತವಾದ ಗೌರವವನ್ನು ಪಡೆಯುತ್ತಿರುವ ಮೂರನೇ ವ್ಯಕ್ತಿ. ಈ ಹಿಂದೆ ಪಶ್ಚಿಮ ಜರ್ಮನಿಯ ಮೊದಲ ನಾಯಕ ಕೊರ್ನಾಡ್‌ ಅಡೆನರ್‌ ಹಾಗೂ ಜರ್ಮನಿ ಏಕೀಕರಣದ ರೂವಾರಿ ಹೆಲ್‌ಮುಟ್‌ ಕೌಲ್‌ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.