Job Description: * ಡೆನ್ಮಾರ್ಕ್‌ನ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್‌(FRI) ಸಂಸ್ಥೆಯು ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಮಂಗಳೂರಿನ ಜ್ಯೋತ್ನಾ ಅಮೃತ್ ಪಡೆದಿದ್ದಾರೆ. * ಈ ಪ್ರಶಸ್ತಿಯನ್ನು FRI ಸಂಸ್ಥೆಯು ನೀಡುತ್ತಿದ್ದು ಅಂತಿಮ ಪಟ್ಟಿಗೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿತ್ತು, ಈ ಐವರಲ್ಲಿ ಮಂಗಳೂರಿನ ಸಾಧಕಿ ಜೋತ್ಸಾ ಕೂಡ ಸೇರಿದ್ದು, ಮಾ. 2ರಂದು ಈ ಐವರಲ್ಲಿ ಒಬ್ಬರನ್ನು ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿ ಜ್ಯೋತ್ನಾ ಪ್ರಶಸ್ತಿ ಪಡೆದಿದ್ದಾರೆ. * ಕೋಪನ್‌ಹೇಗನ್ ರೈಲ್ವೆ ವಿಭಾಗದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಜ್ಯೋತ್ಸಾ ಅವರು ಹಲವಾರು ರೈಲ್ವೆ ಯೋಜನೆಗಳಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ ಹಾಗಾಗಿ 'ಜಕಾರ್ತಾ ಮಾಸ್ ಲ್ಯಾಪಿಡ್ ಟ್ರಾನ್ಸಿಟ್ ರೈಲು ಯೋಜನೆಯಲ್ಲಿ ಅವರು ಮಾಡಿರುವ ಸಾಧನೆ ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. * ಇವರು ಮೂಲತಃ ಮಂಗಳೂರು ಬೋಳೂರು ತಿಲಕ ನಗರ ನಿವಾಸಿ, ಅಮೃತ್ ಲೀಲಾ ದಂಪತಿ ಪುತ್ರಿ ಯಾಗಿರುವ ಜ್ಯೋತ್ಸಾ ಅಮೃತ್ ಗಣರಾಜ್ಯೋತ್ಸವ ಪರೇಡ್‌ನಲ್ಲಿ ದೇಶದ ನೌಕಾಪಡೆಯ ತುಕಡಿಯನ್ನು ಮುನ್ನಡೆಸಿದ ದಿಶಾ ಅಮೃತ್‌ ಅವರ ಸಹೋದರಿಯಾಗಿದ್ದಾರೆ.