* ಬೆಂಗಳೂರು ಮೂಲದ ಕನ್ನಡ ಕವಯಿತ್ರಿ, ಲೇಖಕಿ ಮತ್ತು ಹೋರಾಟಗಾರ್ತಿ ಮಮತಾ ಜಿ ಸಾಗರ್ ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳಿಗಾಗಿ ಇತ್ತೀಚೆಗೆ ವಿಶ್ವ ಬರಹಗಾರರ ಸಂಸ್ಥೆ (WOW) World Organization of Writers ಯಿಂದ ವಿಶ್ವ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. * ಏಪ್ರಿಲ್ 4 ರಿಂದ 6 ರವರೆಗೆ ನೈಜೀರಿಯಾದ ಅಬುಜ ನಗರದಲ್ಲಿ ಜಾಗತಿಕ ಬರಹಗಾರರ ಒಕ್ಕೂಟ ಆಯೋಜಿಸಿದ್ದ ಏಳನೇ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಮಮತಾ  ಸಾಗರ್ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. * ಪ್ಯಾನ್ ಆಫ್ರಿಕಲ್ ಕಂಟ್ರೀಸ್‌ ಅಸೋಸಿಯೇಶನ್ ಆಫ್ ರೈಟರ್ಸ್, ಅಸೆಂಬ್ಲಿ ಆಫ್ ಯುರೇಷಿಯನ್ ಪೀಪಲ್ಸ್, ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಜಂಟಿಯಾಗಿ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದ್ದವು.