Job Description: * ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ರವರು ಮಿಷನ್ ಒಲಿಂಪಿಕ್ಸ್ ಸೆಲ್ ಮತ್ತು ರಾಷ್ಟ್ರೀಯ ಕ್ರೀಡಾ ಒಕ್ಕೂಟ ಮುಂದೆ ಸಾಗಲು ಅಗತ್ಯವಿರುವ ಎಲ್ಲಾ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. * ಅನುರಾಗ್ ಸಿಂಗ್ ಠಾಕೂರ್ ರವರು ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣವನ್ನು ದೇಶಕ್ಕೆ ಸಮರ್ಪಿಸಿ, ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅರ್ಹತೆ ಗಳಿಸಿದ ಅಥ್ಲೀಟ್ ಆಕಾಶದೀಪ್ ಸಿಂಗ್, ಪ್ರಿಯಾಂಕಾ ಗೋಸ್ವಾಮಿ ಸೇರಿದಂತೆ ಅನೇಕ ಆಟಗಾರರನ್ನು ಅವರು ಶ್ಲಾಘಿಸಿದರು.* 2014ರಲ್ಲಿ ಕ್ರೀಡಾ ಮತ್ತು ಯುವಜನ ವ್ಯವಹಾರಗಳಿಗೆ ಇದ್ದ 964 ಕೋಟಿ ರೂಪಾಯಿ ಬಜೆಟ್ ಅನುದಾನ ಹಂಚಿಕೆಗೆ ಹೋಲಿಸಿದರೆ, 2023-24ರಲ್ಲಿ 3,397 ಕೋಟಿ ರೂಪಾಯಿಗೆ ಹೆಚ್ಚಾಗಿದೆ.