Job Description: * ಭಾರತ ಮತ್ತು ಗಯಾನಾ ನಡುವಿನ ವಾಯು ಸೇವೆಗಳ ಒಪ್ಪಂದಕ್ಕೆ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಯಿತು. ಅಗತ್ಯವಾದ ಆಂತರಿಕ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ, ರಾಜತಾಂತ್ರಿಕ ಟಿಪ್ಪಣಿಗಳ ವಿನಿಮಯದ ನಂತರ ವಾಯು ಸೇವಾ ಒಪ್ಪಂದ ಜಾರಿಗೆ ಬರಲಿದೆ.* ಗಯಾನಾದೊಂದಿಗೆ ವಾಯು ಸೇವೆ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಉಭಯ ದೇಶಗಳ ನಡುವೆ ವಿಮಾನ ಸೇವೆಗಳನ್ನು ಆರಂಭಿಸಲು ಸೂಕ್ತ ಕ್ರಮ ಜಾರಿಗೆ ತರಲಾಗುವುದು. ಏರ್ ಸರ್ವೀಸಸ್ ಅಗ್ರಿಮೆಂಟ್ (ASA) ಎರಡು ದೇಶಗಳ ನಡುವಿನ ವಾಯು ಸೇವೆಗೆ ವಿಶೇಷ ಚೌಕಟ್ಟು ಒದಗಿಸಲಾಗುತ್ತದೆ.