Job Description: * ತೆಲಂಗಾಣ ಕೇಡರ್‌ನ 1996 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಐಜಿಪಿ ಚಾರು ಸಿನ್ಹಾ ರವರು ಸಿಆರ್‌ಪಿಎಫ್‌ಗೆ ಇನ್ಸ್‌ಪೆಕ್ಟರ್ ಜನರಲ್ ಆಗಿ ಶ್ರೀನಗರ ವಲಯದ ಮುಖ್ಯಸ್ಥರಾಗಿದ್ದು, ಕೇಂದ್ರ ಕಾಶ್ಮೀರದಲ್ಲಿ ಸೇವಾವಧಿಯನ್ನು ಪೂರ್ಣಗೊಳಿಸಿದ CRPF ನ ಮೊದಲ ಮಹಿಳಾ ಇನ್ಸ್‌ಪೆಕ್ಟರ್ ಜನರಲ್ ಎನಿಸಿಕೊಂಡಿದ್ದಾರೆ. * ಶ್ರೀನಗರ ವಲಯದಲ್ಲಿ ನಿಯೋಜನೆಗೊಂಡಿರುವ CRPF ತನ್ನ ಮೊದಲ ಮಹಿಳಾ ಇನ್ಸ್ಪೆಕ್ಟರ್ ಜನರಲ್(ಐಜಿ) ಚಾರು ಸಿನ್ಹಾ ಅವರಿಗೆ ವಿದಾಯ ಹೇಳಿದ್ದು, ಅವರು ಮಧ್ಯ ಕಾಶ್ಮೀರದಲ್ಲಿ ಎರಡೂವರೆ ವರ್ಷಗಳ ಅತ್ಯಂತ ಯಶಸ್ವಿ ಅವಧಿಯನ್ನು ಪೂರ್ಣಗೊಳಿಸಿದ ನಂತರದಲ್ಲಿ ಹೈದರಾಬಾದ್ ಗೆ ವರ್ಗಾವಣೆಗೊಂಡಿದ್ದಾರೆ.* ಈ ಹಿಂದೆ ಬಿಹಾರ ವಲಯದ ಸಿಆರ್‌ಪಿಎಫ್ ಐಜಿ ಆಗಿದ್ದರು. ಇವರು ನಕ್ಸಲ್ ವಿರೋಧಿ ಕಾರ್ಯಾಚರಣೆಗಳು (ಬಿಹಾರದಲ್ಲಿ) ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ (ಜಮ್ಮುವಿನಲ್ಲಿ) ಸೆಕ್ಟರ್‌ಗಳಿಗೆ ಕಮಾಂಡ್ ಮಾಡಿದ ಮೊದಲ ಮಹಿಳಾ ಸಿಆರ್‌ಪಿಎಫ್ ಐಜಿಯಾಗಿದ್ದಾರೆ. ಸಿಆರ್‌ಪಿಎಫ್‌ಗೆ ನಿಯೋಜಿಸುವ ಮೊದಲು, ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.