* ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ MGI ಹಾಲ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ಪ್ರಶಸ್ತಿಯನ್ನು ಪಂಜಾಬ್‌ನ ಜಲಂಧರ್ ಮೂಲದ 20 ವರ್ಷದ ರಾಚೆಲ್ ಗುಪ್ತಾ ಪ್ರತಿಷ್ಠಿತ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ 2024 ರ ಕಿರೀಟವನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮತ್ತು ಮೂರನೇ ಏಷ್ಯನ್ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ.* ರಾಚೆಲ್ ಗ್ರ್ಯಾಂಡ್ ಫಿನಾಲೆಯಲ್ಲಿ ಫಿಲಿಪ್ಪೀನ್ಸ್‌ನ ನೆಚ್ಚಿನ ಸಿಜೆ ಒಪಿಯಾಜಾ ಅವರನ್ನು ಸೋಲಿಸಿ ಕಿರೀಟವನ್ನು ಗೆದ್ದರು. ಅವರ ಜೊತೆಗೆ, ನಾಲ್ಕು ರನ್ನರ್-ಅಪ್‌ಗಳನ್ನು ಘೋಷಿಸಲಾಯಿತು: ಫಿಲಿಪ್ಪೀನ್ಸ್ನ ಕ್ರಿಸ್ಟಿನ್ ಜೂಲಿಯಾನ್ ಓಪಿಯಾಜಾ (1 ನೇ ರನ್ನರ್-ಅಪ್), ಮ್ಯಾನ್ಮಾರ್‌ನ ಥೆ ಸು ನೈನ್ (2 ನೇ ರನ್ನರ್ ಅಪ್), ಫ್ರಾನ್ಸ್‌ನ ಸಫಿಯೆಟೌ ಕಬೆಂಗೆಲೆ (3 ನೇ ರನ್ನರ್ ಅಪ್), ಮತ್ತು ತಾಲಿತಾ ಹಾರ್ಟ್‌ಮನ್ ಬ್ರೆಜಿಲ್ (4ನೇ ರನ್ನರ್ ಅಪ್) ಪ್ರಶಸ್ತಿ ಪಡೆದರು. * ರಾಚೆಲ್ ಗುಪ್ತಾ ಅವರು ಕಳೆದ ಆಗಸ್ಟ್ 11ರಂದು ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ಲಾಮಾನಂದ್ ಸೂಪರ್ ಮಾಡೆಲ್ ಇಂಡಿಯಾ 2024 ಫೈನಲ್ಸ್‌ನಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2024 ಕಿರೀಟವನ್ನು ಪಡೆದುಕೊಂಡಿದ್ದರು.* ಕಳೆದ ಮೇ ತಿಂಗಳಿನಲ್ಲಿ ಗ್ಲಾಮಾನಂದ್ ಗ್ರೂಪ್ ಆಯೋಜಿಸಿದ ಮಿಸ್ ಗ್ರ್ಯಾಂಡ್ ಇಂಡಿಯಾ 2024 ಸ್ಪರ್ಧೆಗೆ ಫೈನಲಿಸ್ಟ್ ಎಂದು ರಾಚೆಲ್ ಅವರನ್ನು ಘೋಷಿಸಲಾಗಿತ್ತು.  * 2022 ರ ರಾಚೆಲ್ ಅವರು ಆಗಸ್ಟ್‌ನಲ್ಲಿ ಜೈಪುರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸ್ಥಾನ ಪಡೆದರು.