* ಯುವ ಆಪ್ದಾ ಮಿತ್ರ ಯೋಜನೆಯಡಿ 2 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.* ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್, ನೆಹರು ಯುವ ಕೇಂದ್ರ ಸಂಘಟನೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ 2 ಲಕ್ಷ 37 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ತರಬೇತಿ ಪಡೆಯಲಿದ್ದಾರೆ.* ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ 20ನೇ ರಚನಾ ದಿನಾಚರಣೆಯ ಸಂದರ್ಭದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು.* ಈ ವರ್ಷದ ಜುಲೈನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯುವ ಆಪ್ದಾ ಮಿತ್ರ ಯೋಜನೆಯ ಪ್ರಸ್ತಾವನೆಯನ್ನು ಎನ್‌ಡಿಆರ್‌ಎಫ್‌ನಿಂದ 470 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಮೋದಿಸಿದರು.* ಈ ಯೋಜನೆ ಅಡಿಯಲ್ಲಿ ದೇಶದ 315 ಅತ್ಯಂತ ವಿಪತ್ತು ಪೀಡಿತ ಜಿಲ್ಲೆಗಳಲ್ಲಿ 1300 ತರಬೇತಿ ಪಡೆದ ಆಪ್ದಾ ಮಿತ್ರ ಸ್ವಯಂಸೇವಕರನ್ನು ಮಾಸ್ಟರ್ ತರಬೇತುದಾರರನ್ನಾಗಿ ಮಾಡಲಾಗುವುದು.* ಎನ್‌ ಸಿ ಸಿ, ಎನ್‌ ಎಸ್‌ ಎಸ್, ಎನ್‌ ವೈ ಕೆ ಎಸ್ ಮತ್ತು ಬಿಎಸ್&ಜಿ (ಭಾರತ್ ಸ್ಕೌಟ್ಸ್ & ಗೈಡ್ಸ್) ನಿಂದ 2.37 ಲಕ್ಷ ಸ್ವಯಂಸೇವಕರಿಗೆ ವಿಪತ್ತು ಸನ್ನದ್ಧತೆ ಮತ್ತು ಪ್ರತಿಕ್ರಿಯೆಗಾಗಿ ತರಬೇತಿ ನೀಡಲಾಗುವುದು. ಯಾವುದೇ ವಿಪತ್ತಿನ ಸಂದರ್ಭದಲ್ಲಿ ಸಮುದಾಯವನ್ನು ಮೊದಲ ಪ್ರತಿಸ್ಪಂದಕರನ್ನಾಗಿ ಸಿದ್ಧಪಡಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಇದು ಅನುಗುಣವಾಗಿದೆ.