* ಇಟಲಿಯಲ್ಲಿ ಸಿಲುಕಿದ ಮಹಿಳಾ ಹತ್ಯೆ/ಲೈಂಗಿಕ ಹಿಂಸೆಯ ವಿರುದ್ಧ ಕ್ರಮಗೊಳ್ಳಲು, 2025ರ ನವೆಂಬರ್ 25 ರಂದು Italian Parliament ಅವರು ಒಂದು ಹೊಸ ಕಾನೂನನ್ನು ಒಪ್ಪಿಕೊಂಡು, Femicide Law ಅನ್ನು ಕಾನೂನಾತ್ಮಕ ಮಾನ್ಯತೆ ನೀಡಿದ್ದು, ಇದು ದೇಶದಲ್ಲಿ ಮಹತ್ವಪೂರ್ಣ ನೀತಿ ಬದಲಾವಣೆ.* ಇಟಲಿ ಸಂಸತ್ತು ಇತ್ತೀಚೆಗೆ ಫೆಮಿಸೈಡ್‌ ಅನ್ನು ಕಾನೂನಿನಿಂದ ತೆಗೆದುಹಾಕಿ, ಮಹಿಳೆಯರ ಮೇಲೆ ಲಿಂಗಾಧಾರಿತ ಕಾರಣಗಳಿಂದ ನಡೆಯುವ ಹತ್ಯೆಗಳಿಗೆ ಕಠಿಣ ಶಿಕ್ಷೆ ವಿಧಿಸುವ ಹೊಸ ಕಾನೂನನ್ನು ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಇಟಲಿಯ ಪ್ರಧಾನಿ ಜಿಯಾರ್ಜಿಯಾ ಮೆಲೋನಿ “ಮಹಿಳೆಯರ ಸುರಕ್ಷತೆ ನಮ್ಮ ಮೊದಲ ಆದ್ಯತೆ” ಎಂದು ಹೇಳಿದ್ದಾರೆ.* ಫೆಮಿಸೈಡ್ ಎಂದರೆ ವಿಶ್ವಸಂಸ್ಥೆಯ (UN) ವ್ಯಾಖ್ಯಾನದ ಪ್ರಕಾರ, ಲಿಂಗವೇ ಕಾರಣವಾಗಿರುವ ಮಹಿಳೆಯರ ಹತ್ಯೆಯನ್ನು ಫೆಮಿಸೈಡ್ ಎಂದು ಕರೆಯಲಾಗುತ್ತದೆ.* ಇದನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ: 1 . ಸಂಗಾತಿಯವರು (ಪತಿ/ಬಾಯ್‌ಫ್ರೆಂಡ್) ಮಾಡುವ ಹತ್ಯೆ2 .  ಕುಟುಂಬ ಸದಸ್ಯರು ಮಾಡುವ ಹತ್ಯೆ3 .  ಬೇರೆಯವರು ಮಾಡುವ ಉದ್ದೇಶಿತ ಹತ್ಯೆ* 2024ರ ಯುಎನ್ ವರದಿ ಪ್ರಕಾರ, ಸಮಗ್ರವಾಗಿ ಸುಮಾರು 50,000 ಮಹಿಳೆಯರು ತಮ್ಮ ಸಂಗಾತಿ ಅಥವಾ ಕುಟುಂಬ ಸದಸ್ಯರಿಂದಲೇ ಕೊಲ್ಲಲ್ಪಟ್ಟಿದ್ದಾರೆ.* ಇತ್ತೀಚೆಗೆ ಇಟಲಿಯಲ್ಲಿ ನಡೆದ ಹಲವಾರು ಹಿಂಸಾತ್ಮಕ ಘಟನೆಗಳು ಈ ಕಾನೂನಿನ ಅಗತ್ಯವನ್ನು ತೋರಿಸಿವೆ. 2023ರಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಮಾಜಿ ಸ್ನೇಹಿತ 70 ಬಾರಿ ಚಾಕುವಿನಿಂದ ಇರಿದು ಕೊಂದ ಘಟನೆ ದೇಶವನ್ನು ಬೆಚ್ಚಿಬೀಳಿಸಿತು. ಈ ಪ್ರಕರಣಗಳ ಹಿನ್ನೆಲೆಯಲ್ಲಿ: ಲಿಂಗಾಧಾರಿತ ಹತ್ಯೆಗೆ ಜೀವಾವಧಿ ಶಿಕ್ಷೆ, ಮಹಿಳೆಯರ ರಕ್ಷಣೆಗೆ ಮೇಲ್ವಿಚಾರಣೆ ಮತ್ತು ಕಾನೂನು ಕ್ರಮಗಳ ಬಲಪಡಿಕೆ  ಇಂತಹ ಹೊಸ  ಕಾನೂನು ಒಳಗೊಂಡಿದೆ.* ಮೆಕ್ಸಿಕೊ, ಚಿಲಿ ಮುಂತಾದ ಕೆಲವು ದೇಶಗಳಲ್ಲಿ ಫೆಮಿಸೈಡ್‌ ಗೆ ವಿಶೇಷ ಕಾನೂನುಗಳಿವೆ.ಆದರೆ ತಜ್ಞರ ಅಭಿಪ್ರಾಯದಲ್ಲಿಕಾನೂನು ಇದ್ದರೂ ಪೊಲೀಸ್ ತನಿಖೆ, ನ್ಯಾಯಾಂಗ ವ್ಯವಸ್ಥೆ, ಸಾಮಾಜಿಕ ಮನೋಭಾವ ಎಲ್ಲದಲ್ಲಿಯೂ ಬದಲಾವಣೆ ಅಗತ್ಯವಿದೆ.* ಇಟಲಿಯಲ್ಲಿ ಮತ್ತೊಂದು ಚರ್ಚೆಯಲ್ಲಿರುವ ಕಾನೂನು ಎಂದರೆ: ಸಮ್ಮತಿಯಿಲ್ಲದ ಯಾವುದೇ ಲೈಂಗಿಕ ಸಂಪರ್ಕವನ್ನು ಅತ್ಯಾಚಾರವಾಗಿ ಪರಿಗಣಿಸುವುದು. ಪ್ರಸ್ತುತ ಕಾನೂನು ಹಿಂಸೆ, ಬೆದರಿಕೆ ಅಥವಾ ಅಧಿಕಾರದ ದುರುಪಯೋಗ ಇದ್ದಾಗ ಮಾತ್ರ ಅತ್ಯಾಚಾರ ಎಂದು ವ್ಯಾಖ್ಯಾನಿಸುತ್ತದೆ.* ಫೆಮಿಸೈಡ್ ಅನ್ನು ಕಾನೂನಿನಲ್ಲಿ ಪ್ರತ್ಯೇಕವಾಗಿ ಗುರುತಿಸುವುದು ಮಹಿಳೆಯರ ಮೇಲಿನ ಲಿಂಗಾಧಾರಿತ ಹಿಂಸಾಚಾರದ ಗಂಭೀರತೆಯನ್ನು ತೋರಿಸುತ್ತದೆ, ಸಾಮಾಜಿಕ ಜಾಗೃತಿ ಹೆಚ್ಚಿಸುತ್ತದೆ ಹಾಗೂ ಕಠಿಣ ಶಿಕ್ಷೆಗಳ ಮೂಲಕ ಅಪರಾಧ ಕಡಿತಕ್ಕೆ ಸಹಕಾರಿಯಾಗುತ್ತದೆ.* ಇಟಲಿಯ ಹೊಸ ಕ್ರಮಗಳು ಜಾಗತಿಕವಾಗಿ ಲಿಂಗಾಧರಿತ ಹಿಂಸಾಚಾರ ತಡೆಯ ಲೈಂಗಿಕ ಸಮಾನತೆ ಚಳವಳಿಗೆ ಹೊಸ ದಿಕ್ಕನ್ನು ನೀಡುವಂತಿವೆ.