* ಭಾರತವು ಡಿಸೆಂಬರ್ 17 ರಿಂದ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ವಿಶ್ವದ ಮೊದಲ ಡಿಜಿಟಲ್ ಜಾಗತಿಕ ಸಾಂಪ್ರದಾಯಿಕ ಔಷಧ ಗ್ರಂಥಾಲಯ’ವನ್ನು ಉದ್ಘಾಟಿಸಲಿದ್ದಾರೆ ಎಂದು ಆಯುಷ್ ಸಚಿವಾಲಯದ ಕಾರ್ಯದರ್ಶಿ ಡಾ. ರಾಜೇಶ್ ಕೊಟೆಚಾ ತಿಳಿಸಿದ್ದಾರೆ.*Traditional Knowledge Digital Library (TKDL) ಆರಂಭವಾಗುವುದರಿಂದ ಭಾರತವು ತನ್ನ ಸಾಂಪ್ರದಾಯಿಕ ವೈದ್ಯಕೀಯ ಮಾಹಿತಿಯನ್ನು ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ತಂದ ಮೊದಲ ರಾಷ್ಟ್ರವಾಗಿದೆ. * ಈ ಜಾಗತಿಕ ಶೃಂಗಸಭೆಯಲ್ಲಿ 100ಕ್ಕೂ ಹೆಚ್ಚು ದೇಶಗಳ ಆರೋಗ್ಯ ಸಚಿವರು ಮತ್ತು ನಿಯೋಗಗಳು ಭಾಗವಹಿಸಲಿದ್ದಾರೆ. ಇದು ವಿಶ್ವದ ಮಟ್ಟದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದ ಅತಿದೊಡ್ಡ ಅಂತರರಾಷ್ಟ್ರೀಯ ಕಾರ್ಯಕ್ರಮವೆಂದು ಹೇಳಲಾಗಿದೆ.* ಹೊಸ ಡಿಜಿಟಲ್ ಗ್ರಂಥಾಲಯದಲ್ಲಿ, ಭಾರತದ 2.5 ಮಿಲಿಯನ್ (25 ಲಕ್ಷ)ಕ್ಕಿಂತಲೂ ಹೆಚ್ಚು ಪ್ರಕಟಣೆಗಳು ಸೇರಿಸಲ್ಪಡಲಿವೆ, ಸಾಂಪ್ರದಾಯಿಕ ಔಷಧ ಸಂಬಧಿತ ಎಲ್ಲಾ ಮಾಹಿತಿಯೂ ಒಂದೇ ವೇದಿಕೆಯಲ್ಲಿ ದೊರೆಯಲಿದೆ, ಇದು ಸರ್ವರಿಗೆ ಮುಕ್ತ ಪ್ರವೇಶದ ಡಿಜಿಟಲ್ ಸಂಪನ್ಮೂಲವಾಗಿರುತ್ತದೆ ಹಾಗೂ ಭಾರತವು ತನ್ನ ಸಂಶೋಧನಾ ಸಾಮರ್ಥ್ಯ, ಡಿಜಿಟಲ್ ಆರೋಗ್ಯ ವೇದಿಕೆಗಳು ಮತ್ತು ಜಾಗತಿಕ ಸಹಯೋಗದ ಮೂಲಕ ನವೀನತೆ ಮತ್ತು ನಾಯಕತ್ವವನ್ನು ಪ್ರದರ್ಶಿಸಲಿದೆ.* ಈ ಡಿಜಿಟಲ್ ಜಾಗತಿಕ ಔಷಧ ಗ್ರಂಥಾಲಯವು ಸಾಂಪ್ರದಾಯಿಕ ಔಷಧ ಜ್ಞಾನವನ್ನು ಪ್ರಪಂಚದ ಎಲ್ಲಾ ಸಂಶೋಧಕರು, ವೈದ್ಯರು ಹಾಗೂ ಆಸಕ್ತರಿಗೆ ಸುಲಭವಾಗಿ ತಲುಪಿಸುವ ಮಹತ್ತರ ಹೆಜ್ಜೆಯಾಗಿದೆ.