Job Description: * ರಾಜ್ಯದ ದಕ್ಷಿಣ ಗಾರೊ ಹಿಲ್ ಜಿಲ್ಲೆಯ ಅರಣ್ಯದಲ್ಲಿ ಗುಹೆಯೊಂದರ ಆಳದಿಂದ ಹೊಸ ಜಾತಿಯ ಕಪ್ಪೆ ಪತ್ತೆಯಾಗಿದ್ದು, ಕಪ್ಪೆಯ ನೂತನ ಪ್ರಭೇದವನ್ನು ಭಾರತೀಯ ಪ್ರಾಣಿ ಸರ್ವೇಕ್ಷಣಾ ಸಂಸ್ಥೆ (ZSI) ಸಂಶೋಧಕರು ಪತ್ತೆ ಹಚ್ಚಿದ್ದಾರೆ.* ಈ ಆವಿಷ್ಕಾರವು ದೇಶದ ಗುಹೆಯ ಒಳಗಿನಿಂದ ಕಪ್ಪೆಯನ್ನು ಪತ್ತೆ ಮಾಡಿರುವುದು ಎರಡನೇ ಬಾರಿಗೆ, ಮೊದಲನೆಯದು 2014 ರಲ್ಲಿ ತಮಿಳುನಾಡಿನ ಗುಹೆಯಿಂದ ಮೈಕ್ರಿಕ್ಸಾಲಸ್ ಸ್ಪೆಲುಂಕಾ ಪತ್ತೆಯಾಗಿದೆ ಎಂದು ಅವರು ಹೇಳಿದರು.* 'ಪುಣೆ ಮೂಲದ ZSI ಸಂಶೋಧಕರು ದಕ್ಷಿಣ ಗಾರೊ ಹಿಲ್ಸ್ ಜಿಲ್ಲೆಯ ಸಿಜು ಗುಹೆಗಳಲ್ಲಿ ಈ ನೂತನ ಪ್ರಭೇದದ ಕಪ್ಪೆಗಳನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ, ಈ ಪ್ರಭೇದಕ್ಕೆ ಅಮೊಲಾಪ್ಸ್ ಸಿಜು ಎಂದು ಹೆಸರಿಸಲಾಗಿದೆ' ಎಂದು ಸಂಶೋಧನಾ ತಂಡದ ಸದಸ್ಯರ ಲ್ಲೊಬ್ಬರಾದ ಭಾಸ್ಕರ್ ಸೈಕಿಯಾ ತಿಳಿಸಿದ್ದಾರೆ.