Job Description: * ಮಾರ್ಚ್ 23 ಹುತಾತ್ಮರ ದಿವಸ್‌ನ್ನು ಆಚರಿಸುತ್ತದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿವೀರ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ದಿನವಿಂದು.* ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಇವರು ಮೂವರು ಹೇಗಾದರೂ ಸರಿ ಬ್ರಿಟಿಷರನ್ನು ನಮ್ಮ ದೇಶದಿಂದ ಓಡಿಸಬೇಕೆಂದು ವೀರ ಹೋರಾಟ ಮಾಡುತ್ತಿದ್ದು, 1929 ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ದಾಳಿ ಮಾಡಿದರು. ಈ ಕಾರಣಕ್ಕೆ ಇವರನ್ನು ಬಂಧಿಸಿ ಮರಣದಂಡನೆ ಶಿಕ್ಷೆ ನೀಡಲಾಯಿತು.* 1931 ಭಾರತೀಯರ ಪಾಲಿಗೆ ಕರಾಳ ದಿನ, ಈ ದಿನ ಭಾರತೀಯರು ಮೂವರು ಮಹಾನ್‌ ಯೋಧರನ್ನು ಕಳೆದುಕೊಂಡರು. ಈ ಮೂವರನ್ನು ಈ ದಿನ ಗಲ್ಲಿಗೇರಿಸಲಾಯಿತು. ಇವರನ್ನು ಗಲ್ಲಿಗೇರಿಸಿದಾಗ ಸುಖದೇವ್‌ ಥಾಪರ್, ಭಗತ್‌ ಸಿಂಗ್ ಅವರಿಗೆ 23 ವರ್ಷ, ರಾಜಗುರು ಅವರಿಗೆ ಕೇವಲ 22 ವರ್ಷ.