* ಭಾರತದಲ್ಲಿ ರಾಷ್ಟ್ರೀಯ ಲಸಿಕೆ ದಿನವನ್ನು ಪ್ರತಿ ವರ್ಷ ಮಾರ್ಚ್ 16 ರಂದು ಆಚರಿಸಲಾಗುತ್ತದೆ. * 2024ರ ರಾಷ್ಟ್ರೀಯ ಲಸಿಕಾ ದಿನದ ಥೀಮ್ ಅನ್ನು ಇನ್ನು ನಿಗದಿಪಡಿಸಿಲ್ಲ.* ದೇಶದಲ್ಲಿ ಮೊದಲ ಲಸಿಕೆ ದಿನಾಚರಣೆ ನಡೆದದ್ದು 1995ರ ಮಾರ್ಚ್ 16ರಂದು. ಅಂದು ದೇಶದಲ್ಲಿ ಪೋಲಿಯೊ ಹನಿ ಹಾಕುವ 'ಪಲ್ಸ್‌ ಪೋಲಿಯೊ' ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಎರಡು ದಶಕಗಳ ಬಳಿಕ ದೇಶದಲ್ಲಿ ಕ್ರಮೇಣ ಪೋಲಿಯೊ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ, 2014ರಲ್ಲಿ ಭಾರತವನ್ನು ಪೋಲಿಯೊ ಮುಕ್ತ ಎಂದು ಘೋಷಿಸಲಾಯಿತು.* ಸಕಾಲದಲ್ಲಿಲಸಿಕೆ ಹಾಕಿಸುವುದರಿಂದ ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಸಾವಿನಿಂದ ಪಾರಾಗುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ಮಾಹಿತಿ ನೀಡಿದೆ. 20-30 ಲಕ್ಷ ಮಕ್ಕಳ ಜೀವ ಜಾಗತಿಕವಾಗಿ ಪ್ರತಿವರ್ಷ ಉಳಿಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.