* ಕನ್ನಡದ ಪ್ರತಿಭಾವಂತ ಯುವಕ ನೂತನ ಅವರು ಜಾಗತಿಕ ವೇದಿಕೆಯಲ್ಲಿ ತಮ್ಮ ಕಲೆಯ ಮೂಲಕ ಮಹತ್ವದ ಸಾಧನೆ ಮಾಡಿ, ಜಗತ್ತಿನ ಮೊದಲ AI (Artificial Intelligence) ಚಿತ್ರ ತಯಾರಕರ ಪ್ರಶಸ್ತಿ ಪಡೆದಿದ್ದಾರೆ. ಈ ಅಪರೂಪದ ಗೌರವವನ್ನು ಇಂಡೋ–ಕೊರಿಯಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಿಜೃಂಭಣೆಯಿಂದ ಪ್ರದಾನ ಮಾಡಲಾಗಿದ್ದು, ಫಿಲ್ಮ್ ತಂತ್ರಜ್ಞಾನದ ಭವಿಷ್ಯವನ್ನು ಮರುಸೃಷ್ಟಿಸುವ ವ್ಯಕ್ತಿಯಾಗಿಯೂ ನೂತನ ಗುರುತಿಸಿಕೊಂಡಿದ್ದಾರೆ.* ಕನ್ನಡದಲ್ಲಿ 'ಲವ್ ಯು' ಎಂಬ ಹೆಸರಿನಲ್ಲಿ ಅವರು ತಯಾರಿಸಿದ AI ಆಧಾರಿತ ಚಿತ್ರಕ್ಕೆ ಈ ಪ್ರಶಸ್ತಿ ದೊರಕಿದೆ. ಈ ಚಿತ್ರವನ್ನು ಜಗತ್ತಿನ ಮೊದಲ AI ಸಂಯುಕ್ತ ಚಲನಚಿತ್ರ ಎಂದು ಗುರುತಿಸಲಾಗಿದೆ. ಇಂಡೋ–ಕೊರಿಯಾ ಫಿಲ್ಮ್ ಫೆಸ್ಟಿವಲ್ ವೇದಿಕೆಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. * ಪ್ರಶಸ್ತಿ ಪ್ರದಾನ ಸಮಾರಂಭ ಇಂಡೋ–ಕೊರಿಯಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಜರುಗಿದ್ದು, ವಿವಿಧ ದೇಶಗಳ ಸಿನೆಮಾ ತಜ್ಞರು, ನಿರ್ದೇಶಕರು ಮತ್ತು ಕಲಾವಿದರು ಇದರಲ್ಲಿ ಭಾಗವಹಿಸಿದ್ದರು.AI ವಲಯದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಹೊಸ ದಿಕ್ಕು ತೋರಿದ ವ್ಯಕ್ತಿಯಾಗಿ ನೂತನ ಅವರನ್ನು ವಿಶ್ವ ಮಾಧ್ಯಮಗಳು ಶ್ಲಾಘಿಸಿವೆ.* ಸದ್ಯ ನೂತನ ಅವರು 'ಮೀ ವಿಥ್ ದಿ ಕಿಂಗ್ ಕೆಂಪೇಗೌಡ' ಮತ್ತು 'ಒಪರೇಷನ್ ಸಿಂಧೂರ್' ಹೆಸರಿನ ಎಐ ಸಿನಿಮಾಗಳ ತಯಾರಿಕೆಯಲ್ಲಿ ನಿರತರಾಗಿದ್ದು, ಶೀಘ್ರದಲ್ಲಿಯೇ ಈ ಸಿನಿಮಾಗಳು ತೆರೆಗೆ ಬರಲಿವೆ.