* ಕೇಂದ್ರ ಸರ್ಕಾರವು ಸಿದ್ಧಾರ್ಥ ಮೊಹಾಂತಿ ಅವರನ್ನು  ಎರಡು ವರ್ಷಗಳ ಅವಧಿಗೆ ಭಾರತೀಯ ಜೀವ ವಿಮಾ ನಿಗಮದ (LIFI.NS) ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಅವರು ಜೂನ್ 2025 ರವರೆಗೆ LIC CEO ಮತ್ತು ವ್ಯವಸ್ಥಾಪಕ ನಿರ್ದೇಶಕ(MD)ರಾಗಿರುತ್ತಾರೆ* ಕಳೆದ ತಿಂಗಳು ಮಾರ್ಚ್ ನಲ್ಲಿ ಸಿದ್ಧಾರ್ಥ ಮೊಹಂತಿ ಅವರನ್ನು ಫೈನಾನ್ಶಿಯಲ್ ಸರ್ವಿಸಸ್ ಇನ್‌ಸ್ಟಿಟ್ಯೂಷನ್ಸ್ ಬ್ಯೂರೊ ಅಧ್ಯಕ್ಷರನ್ನಾಗಿ ನೇಮಿಸಲು ಶಿಫಾರಸು ಮಾಡಲಾಗಿತ್ತು. LIC ಅಧ್ಯಕ್ಷರಾಗಿ ಮಾರ್ಚ್ 13ಕ್ಕೆ ಎಂ.ಆರ್, ಕುಮಾರ್ ಅವರ ಅಧಿಕಾರಾವಧಿಯು ಕೊನೆಗೊಂಡ ನಂತರ ಹಂಗಾಮಿ ಅಧ್ಯಕ್ಷರಾಗಿ ಸಿದ್ಧಾರ್ಥ್ ರವರು ಸೇವೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರವು ಅಧಿಕೃತವಾಗಿ LIC ಅಧ್ಯಕ್ಷರನ್ನಾಗಿ ಸಿದ್ಧಾರ್ಥ ರವರನ್ನು ನೇಮಿಸಿದೆ.