Job Description: * ಕೇಂದ್ರ ಸರ್ಕಾರವು ಕರ್ನಾಟಕದ ಪ್ರವಾಸೋದ್ಯಮ ಆರ್ಥಿಕತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಸಾಗರಮಾಲಾ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ನಾಲ್ಕು ತೇಲುವ (ಪ್ಲೋಟಿಂಗ್) ಜೆಟ್ಟಿಗಳನ್ನು ಮಾರ್ಚ್ 09 ಗುರುವಾರ ದಿನದಂದು ಮಂಜೂರು ಮಾಡಿದೆ.* ಸಾಗರಮಾಲಾ ಅಡಿಯಲ್ಲಿ ಸಚಿವಾಲಯವು 4 ಹೆಚ್ಚುವರಿ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಿದೆ. ಕರ್ನಾಟಕದಲ್ಲಿ ತೇಲುವ ಜೆಟ್ಟಿ ಯೋಜನೆಗಳನ್ನು ಮುಖ್ಯವಾಗಿ ಗುರುಪುರ ನದಿ ಮತ್ತು ನೇತ್ರಾವತಿ ನದಿಗಳನ್ನು ಗುರಿಯಾಗಿಸಿಕೊಂಡು ಅನುಷ್ಠಾನ ಮಾಡಲಾಗುತ್ತದೆ. * ತೇಲುವ ಜೆಟ್ಟಿ ಪರಿಸರ ವ್ಯವಸ್ಥೆಯ ವಿಶಿಷ್ಟ ಮತ್ತು ನವೀನ ಪರಿಕಲ್ಪನೆಯನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ತಮಿಳುನಾಡಿನಲ್ಲಿ ಸಹ ನಾಲ್ಕು ತೇಲುವ ಜೆಟ್ಟಿ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಈ ಯೋಜನೆಗಳು ಪ್ರವಾಸಿಗರಿಗೆ ಸುರಕ್ಷಿತ, ತೊಂದರೆ ರಹಿತ ನಾರಿಗೆ ಒದಗಿಸಲು ಸಹಾಯ ಮಾಡುವುದಲ್ಲದೆ, ಕರಾವಳಿ ಸಮುದಾಯದ ಒಟ್ಟಾರೆ ಅಭಿವೃದ್ಧಿ ಮತ್ತು ಉನ್ನತಿಗೆ ಕಾರಣವಾಗಲಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.