Job Description: * ನೇಪಾಳದ ನೂತನ ಅಧ್ಯಕ್ಷರಾಗಿ 78 ವರ್ಷದ ರಾಮ್ ಚ೦ದ್ರ ಪೌಡಲ್ ರವರು ಮಾರ್ಚ್ 9 ರಂದು ಆಯ್ಕೆಯಾಗಿದ್ದಾರೆ. 3 ಪ್ರಸ್ತುತ ಮೈತ್ರಿ ಸರ್ಕಾರದ ಆಡಳಿತವಿದ್ದು, ರಾಜಕೀಯ ಅನಿಶ್ಚಿತತೆ ಇದೆ.* ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ, ಪೌಡೆಲ್ ನೇತೃ ತ್ವದ ನೇಪಾಳಿ ಕಾಂಗ್ರೆಸ್‌ ಒಳಗೊಂಡಂತೆ ಒಟ್ಟು ಎಂಟು ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯಾಗಿ ರಾಮ್ ಚ೦ದ್ರ ಪೌಡಲ್ ರವರು ಇದ್ದರು.* ಅಧ್ಯಕ್ಷೀಯ ಚುನಾವಣೆಯಲ್ಲಿ ನೇಪಾಳದ ಫೆಡರಲ್ ಸಂಸತ್ತಿನ 313 ಸದಸ್ಯರು ಮತದಾನದಲ್ಲಿ ಭಾಗವಹಿಸಿದರು ಮತ್ತು ಪ್ರಾಂತ್ಯದ ಅಸೆಂಬ್ಲಿಗಳಿಂದ 518 ಸದಸ್ಯರು ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.