* ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರು ಅಕ್ಟೋಬರ್ 1 ರಂದು ನಡೆದ ಏಷ್ಯನ್ ಗೇಮ್ಸ್ 2023ರಲ್ಲಿ (Asian Games 2023) ಐತಿಹಾಸಿಕ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.* ಕರ್ನಾಟಕದ ಬೆಂಗಳೂರಿನ 25 ವರ್ಷದ ಅದಿತಿ ಅಶೋಕ್ ವೆಸ್ಟ್ ಲೇಕ್ ಇಂಟರ್ನ್ಯಾಷನಲ್ ಗಾಲ್ಫ್ ಕೋರ್ಸ್‌ನಲ್ಲಿ 67-66-61-73ರ ಸುತ್ತುಗಳೊಂದಿಗೆ 17-ಅಂಡರ್‌ಗಳೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.* ಅದಿತಿ ಅಶೋಕ್ ಅವರು ಶಿವ ಕಪೂರ್ ನಂತರ ಏಷ್ಯನ್ ಗೇಮ್ಸ್ ಗಾಲ್ಫ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಎರಡನೇ ಭಾರತೀಯ ಮತ್ತು ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. 2002ರಲ್ಲಿ ಬುಸಾನ್ ಏಷ್ಯನ್ ಗೇಮ್ಸ್‌ನಲ್ಲಿ ಶಿವ ಕಪೂರ್ ಚಿನ್ನದ ಪದಕ ಗೆದ್ದಿದ್ದರು.* ಏಷ್ಯನ್ ಗೇಮ್ಸ್‌ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಪ್ರಸ್ತುತ ಗಾಲ್ಫ್‌ನಲ್ಲಿ ಏಳು ಪದಕಗಳನ್ನು (ಮೂರು ಚಿನ್ನ ಮತ್ತು ನಾಲ್ಕು ಬೆಳ್ಳಿ) ಗೆದ್ದಿದೆ.