* ರಾಷ್ಟ್ರಪತಿ ದೌಪದಿ ಮುರ್ಮು ರವರು ನೂತನ ಸಂಸತ್ ಭವನದಲ್ಲಿ ಸೆಪ್ಟೆಂಬರ್ 18-22ರವರೆಗೆ ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅಂಗೀಕಾರವಾದ ಮಹಿಳಾ ಮೀಸಲಾತಿ ಕಾಯ್ದೆಗೆ ಸಹಿ ಹಾಕಿದ್ದಾರೆ.* ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ಮೀಸಲಾತಿ ಕಲ್ಪಿಸುವ ಕಾನೂನು ಇದಾಗಿದ್ದು, ಲೋಕ ಸಭೆ ಹಾಗೂ ರಾಜ್ಯಸಭೆ ಒಮ್ಮತದೊಂದಿಗೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದವು. * ಹೊಸ ಸಂಸತ್‌ ಭವನದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಅಂಗೀಕಾರವಾದ ಏಕೈಕ ಮಸೂದೆ ಇದಾಗಿದೆ.* ಮಹಿಳೆಯರಿಗೆ ರಾಜಕೀಯ ಮೀಸಲಾತಿ‌ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರ ಈ ಮಸೂದೆಯನ್ನು ವಿಶೇಷ ಅಧಿವೇಶನ ಕರೆದು ಮಂಡಿಸಿತ್ತು.