* ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 2023ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 50 ಕೆಜಿ ವಿಭಾಗದಲ್ಲಿ ಭಾರತದ ನಿಖತ್ ಝರೀನ್ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ನೂತನ ದಾಖಲೆ ಬರೆದಿದ್ದಾರೆ. * ಬಾಕ್ಸಿಂಗ್‌ ಲೋಕದ ತಾರೆ ಮೇರಿ ಕೋಮ್ ಬಳಿಕ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಬಾಕ್ಸರ್‌ ಎಂಬ ಕೀರ್ತಿಗೆ ನಿಖತ್ ಭಾಜನರಾಗಿದ್ದಾರೆ.* ಎದುರಾಳಿ ಬಾಕ್ಸರ್ ವಿಯೆಟ್ನಾಂ ಎನ್‌ಗುಯೆನ್ ಥಿ ಥಾಯ್ ಅವರಿಗೆ ಬಲವಾಗಿ ಪಂಚ್‌ಗಳನ್ನು ನೀಡುವ ಮೂಲಕ 28-27, 28-27, 28-27, 29-26 ಮತ್ತು 28-27 ಅಂತರದಲ್ಲಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದ್ದಾರೆ. 2022ರ ಸಾಲಿನ ವಿಶ್ವ ಚಾಂಪಿಯನ್‌ಷಿಪ್‌ನ 52 ಕೆ.ಜಿ ವಿಭಾಗದಲ್ಲಿ ಝರೀನ್ ಚಿನ್ನದ ಪದಕ ಗೆದ್ದಿದ್ದರು.