* ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತೆ ಮಂಡಳಿಯಿಂದ (ನ್ಯಾಕ್) 'ಎ ಗ್ರೇಡ್' ಮಾನ್ಯತೆ ಪಡೆದಿದೆ ಎಂದು ಕುಲಪತಿ ಪ್ರೊ. ಅಹಲ್ಯಾ ಸಂಸ್ಕೃತ ಎಸ್. ರವರು ತಿಳಿಸಿದ್ದಾರೆ. * ನ್ಯಾಕ್ ತಂಡವು ಮೇ 22ರಿಂದ 24ರವರೆಗೆ ಭೇಟಿ ನೀಡಿ ಮೌಲ್ಯಾಂಕನ ಮಾಡಿದ್ದು, ವಿಶ್ವವಿದ್ಯಾಲಯವು ನ್ಯಾಕ್ 'ಎ' ಶ್ರೇಣಿ ಮಾನ್ಯತೆಗೆ ಶ್ರಮಿಸಿದ ಐಕ್ಯುಎಸಿ ನಿರ್ದೇಶಕರು, ಡೀನ್, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಕುಲಪತಿ ಅಭಿನಂದಿಸಿದ್ದಾರೆ.