Job Description: ➤ ಭಾರತದ 15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಅಧಿಕಾರಾವಧಿಯ 4 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಸಾರ್ವಜನಿಕ ಸ್ನೇಹಿ, ಪರಿಸರ ಸ್ನೇಹಿ ಹಾಗೂ ತಂತ್ರಜ್ಞಾನ ಆಧಾರಿತ ಹಲವಾರು ಹೊಸ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.➤ ಚಾಲನೆ ನೀಡಲಾದ ಪ್ರಮುಖ ಯೋಜನೆಗಳು:1. RAAHI (ರಾಷ್ಟ್ರಪತಿ ಭವನ ಆಕ್ಸೆಸ್ ಅಂಡ್ ಹೆರಿಟೇಜ್ ಇಂಟರ್‌ಕನೆಕ್ಟರ್): ಉದ್ದೇಶ: ರಾಷ್ಟ್ರಪತಿ ಭವನದ ಆವರಣ ಮತ್ತು ಹತ್ತಿರದ ಮೆಟ್ರೋ ನಿಲ್ದಾಣದ ನಡುವೆ ಸಾರ್ವಜನಿಕರು ಹಾಗೂ ಸಿಬ್ಬಂದಿಗಾಗಿ ಉಚಿತ ಇ-ಬಸ್ (ಸೌರ/ವಿದ್ಯುತ್) ಸೇವೆ. ಈ ಬಸ್‌ಗಳನ್ನು ಸಂಪೂರ್ಣವಾಗಿ ಮಹಿಳಾ ಚಾಲಕಿಯರು ಮತ್ತು ನಿರ್ವಾಹಕಿಯರು ನಿರ್ವಹಿಸಲಿದ್ದಾರೆ.2. e-Audio Guide (ಆ್ಯಪ್ ಆಧಾರಿತ ಆಡಿಯೋ ಗೈಡ್): ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅದರ ಇತಿಹಾಸ, ವಾಸ್ತುಶಿಲ್ಪ ಹಾಗೂ ಪ್ರಮುಖ ಸ್ಥಳಗಳ ಮಾಹಿತಿ ನೀಡಲು ಈ ಡಿಜಿಟಲ್ ಸೇವೆಯನ್ನು ಆರಂಭಿಸಲಾಗಿದೆ. ಇದು ಹಿಂದಿ, ಇಂಗ್ಲಿಷ್ ಹಾಗೂ 14 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಶ್ರವಣದೋಷವುಳ್ಳವರಿಗಾಗಿ ಸಂಕೇತ ಭಾಷೆ (Sign Language) ಸೌಲಭ್ಯವನ್ನೂ ಒಳಗೊಂಡಿದೆ.3. e-Upahaar (3ನೇ ಆವೃತ್ತಿ): ರಾಷ್ಟ್ರಪತಿಗಳಿಗೆ ಅಧಿಕೃತ ಭೇಟಿಗಳ ಸಂದರ್ಭದಲ್ಲಿ ದೊರೆತ ಸುಮಾರು 300ಕ್ಕೂ ಹೆಚ್ಚು ಅಪರೂಪದ ಕಾಣಿಕೆಗಳನ್ನು (Gifts) ಸಾರ್ವಜನಿಕ ಹರಾಜು ಮಾಡುವ ಡಿಜಿಟಲ್ ವೇದಿಕೆ.4. ಬಾಲ್ಯ - 'ಬಾಲ್ ಪರಿಸರ' (Bachpan Bal Parisar): ರಾಷ್ಟ್ರಪತಿ ಎಸ್ಟೇಟ್‌ನಲ್ಲಿ ವಾಸಿಸುವ ಮಕ್ಕಳಿಗಾಗಿ 'ಕಿಲ್ಕಾರಿ' (ಆಟದ ವಲಯ) ಹಾಗೂ 'ಸಮರ್ಥ ಅಂಗನವಾಡಿ-ಕಮ್-ಪಾಲ್ನಾ' (ಮಕ್ಕಳ ಪಾಲನಾ ಕೇಂದ್ರ) ಸೌಲಭ್ಯಗಳನ್ನು ಆರಂಭಿಸಲಾಗಿದೆ.5. ನೆಟ್ ಝೀರೋ ಎನರ್ಜಿ ಸ್ಟ್ರಾಟೆಜಿ (Net Zero Energy Strategy) ರಾಷ್ಟ್ರಪತಿ ಭವನದ ಸರ್ವಿಸ್ ಬ್ಲಾಕ್‌ನಲ್ಲಿ ಇಂಧನ ಕ್ಷಮತೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪರಿಸರ ಸ್ನೇಹಿ ನೆಟ್-ಝೀರೋ ತಂತ್ರಜ್ಞಾನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.➤ ಬಿಡುಗಡೆಯಾದ ಸ್ಮರಣಾರ್ಥ ಪುಸ್ತಕಗಳು: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ದ್ರೌಪದಿ ಮುರ್ಮು ಅವರ 4 ವರ್ಷಗಳ ಆಡಳಿತಾವಧಿಯನ್ನು ಆಧರಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪಬ್ಲಿಕೇಷನ್ ಡಿವಿಷನ್ ಪ್ರಕಟಿಸಿದ 5 ಪುಸ್ತಕಗಳನ್ನು ಬಿಡುಗಡೆ ಮಾಡಿದರು: ಮೊದಲ ವರ್ಷ: ರಾಷ್ಟ್ರಪತಿ ಭವನ: ರಾಷ್ಟ್ರ ಕಾ ಭವನ ಎರಡನೇ ವರ್ಷ: ಸೇವಾ ಔರ್ ಸಂವೇದನಾ ಮೂರನೇ ವರ್ಷ: ಸಮಾವೇಶಿ ಸಹಭಾಗschedule (ಸಮಾವೇಶಿ ಸಹಭಾಗಿತಾ) ನಾಲ್ಕನೇ ವರ್ಷ: ಭಾರತೀಯತಾ ಕಾ ಉತ್ಸವ್ ಒಡಿಯಾ ಲೇಖನಗಳ ಸಂಗ್ರಹ: ಅಮ ರಾಷ್ಟ್ರಪತಿ – ಅಮ ಗೌರವ್ KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ