Job Description: ➤ ಜಾಗತಿಕ ಸಾಹಿತ್ಯ ವಲಯದ ಅತ್ಯಂತ ಪ್ರತಿಷ್ಠಿತ ಗೌರವಗಳಲ್ಲೊಂದಾದ 'ಇಂಟರ್ನ್ಯಾಷನಲ್ ಬುಕ್ಕರ್ ಪ್ರಶಸ್ತಿ' (International Booker Prize) ಇನ್ಮುಂದೆ ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿದೆ. ಮುಂದಿನ ಒಂದು ದಶಕದ ಕಾಲ (10 ವರ್ಷ) ಈ ಪ್ರಶಸ್ತಿಗೆ ಧನಸಹಾಯ ನೀಡಲು 'ಬುಖ್ಮನ್ ಫಿಲಾಂತ್ರಪೀಸ್' (Bukhman Philanthropies) ಚಾರಿಟೇಬಲ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರಶಸ್ತಿಯ ಹೆಸರನ್ನು 'ಬುಖ್ಮನ್ ಇಂಟರ್ನ್ಯಾಷನಲ್ ಬುಕ್ಕರ್ ಪ್ರಶಸ್ತಿ' (Bukhman International Booker Prize) ಎಂದು ಮರುನಾಮಕರಣ ಮಾಡಲಾಗಿದೆ.➤ ಬಹುಮಾನದ ಮೊತ್ತ ಭಾರಿ ಹೆಚ್ಚಳ (Rs 1.28 Crore): ಮುಂಚೆ ಇದ್ದ 50,000 ಪೌಂಡ್‌ (ಅಂದಾಜು 64 ಲಕ್ಷ ರೂ.) ಬಹುಮಾನದ ಮೊತ್ತವನ್ನು ಈಗ 1,00,000 ಪೌಂಡ್‌ಗೆ (ಅಂದಾಜು 1.28 ಕೋಟಿ ರೂ.) ಹೆಚ್ಚಿಸಲಾಗಿದೆ. ನಿಯಮದ ಪ್ರಕಾರ, ಈ ಬಹುಮಾನದ ಮೊತ್ತವನ್ನು ಮೂಲ ಕೃತಿಯ ಲೇಖಕರು ಮತ್ತು ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದ ಅನುವಾದಕರು ಸಮಾನವಾಗಿ (50:50) ಹಂಚಿಕೊಳ್ಳಲಿದ್ದಾರೆ. ಇದಲ್ಲದೆ, ಶಾರ್ಟ್‌ಲಿಸ್ಟ್ (Shortlist) ಆದ ಪ್ರತಿ ಕೃತಿಗೆ ನೀಡಲಾಗುತ್ತಿದ್ದ ಮೊತ್ತವನ್ನು 5,000 ಪೌಂಡ್‌ಗೆ (ಅಂದಾಜು 6.4 ಲಕ್ಷ ರೂ.) ಹೆಚ್ಚಿಸಲಾಗಿದ್ದು, ಇದನ್ನು ಸಹ ಲೇಖಕ ಮತ್ತು ಅನುವಾದಕರಿಗೆ ಸಮನಾಗಿ ಹಂಚಲಾಗುತ್ತದೆ. ➤ ಡಿಮಿಟ್ರಿ ಮತ್ತು ಡೇರಿಯಾ ಬುಖ್ಮನ್: ಬುಖ್ಮನ್ ಫಿಲಾಂತ್ರಪೀಸ್ ಸಂಸ್ಥೆಯನ್ನು ಬ್ರಿಟಿಷ್ ಉದ್ಯಮಿ ಡಿಮಿಟ್ರಿ ಬುಖ್ಮನ್ (Dmitry Bukhman) ಮತ್ತು ಅವರ ಪತ್ನಿ ಡೇರಿಯಾ ಬುಖ್ಮನ್ ಸ್ಥಾಪಿಸಿದ್ದಾರೆ. ಡಿಮಿಟ್ರಿ ಅವರು ಜಾಗತಿಕವಾಗಿ ಅತ್ಯಂತ ಜನಪ್ರಿಯವಾಗಿರುವ ಮೊಬೈಲ್ ಗೇಮಿಂಗ್ ಕಂಪನಿ 'ಪ್ಲೇರಿಕ್ಸ್' (Playrix - Fishdom ಮತ್ತು Homescapes ಗೇಮ್‌ಗಳ ತಯಾರಕರು) ನ ಸಹ-ಸಂಸ್ಥಾಪಕರಾಗಿದ್ದಾರೆ.ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ