* ಭಾರತ ದೇಶದಲ್ಲಿ ಇಲ್ಲಿಯವರೆಗೆ ಕೋವಿಡ್-19ರ ಜೆಎನ್.1 ಉಪತಳಿಯ 21 ಪ್ರಕರಣಗಳು ಮೂರು ರಾಜ್ಯಗಳಲ್ಲಿ ಪತ್ತೆಯಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ.ಪೌಲ್ ಅವರು 2023 ಡಿಸೆಂಬರ್ 20 ರಂದು ತಿಳಿಸಿದ್ದಾರೆ.* ಗೋವಾದಲ್ಲಿ 19 ಜನರಲ್ಲಿ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಬ್ಬರಲ್ಲಿ ಜೆಎನ್.1 ಉಪತಳಿ ಪತ್ತೆಯಾಗಿದ್ದು, ಎರಡು ವಾರದಿಂದ ಕೋವಿಡ್- 19ಕ್ಕೆ ದೇಶದಲ್ಲಿ 16 ಜನರು ಮೃತಪಟ್ಟಿದ್ದಾರೆ. ಹೊಸ ರೂಪಾಂತರ ತಳಿಯ ಕುರಿತು ಭಾರತೀಯ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.* ಕೋವಿಡ್‌ನ ಹೊಸ ತಳಿಗಳ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಡಿಸೆಂಬರ್ 20 ರಂದು ಪರಿಶೀಲನೆ ನಡೆಸಿದರು. * ದೇಶದಲ್ಲಿ ಡಿಸೆಂಬರ್ 20 ರಂದು (ಬುಧವಾರ) 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 614 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟು 2,311 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯದ ತಿಳಿಸಿದೆ. * 'ಕೋವಿಡ್- ರೂಪಾಂತರ ತಳಿಯಾದ ಜೆಎನ್. 1 ಅಪಾಯಕಾರಿಯಲ್ಲ. ಇದು ಕಡಿಮೆ ಪ್ರಮಾಣದ ಅಪಾಯವನ್ನುಂಟು ಮಾಡುತ್ತದೆ' ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.