Job Description: * ಕನ್ನಡ ಸಾಹಿತ್ಯ ಪರಿಷತ್ತುಅನ್ನು 'ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ' ಹಾಗೂ 'ಡಾ ಎಚ್.ವಿಶ್ವನಾಥ್ ಮತ್ತು ಎಂ.ಎಸ್ ಇಂದಿರಾ ದತ್ತಿ' ಯವರು ಈ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿಯನ್ನು ಘೋಷಿಸಿದ್ದು, ಈ ಪ್ರಶಸ್ತಿಗೆ ಬಸವರಾಜ ಪಾಟೀಲ್ ಸೇಡಂ, ಬಸವರಾಜ ಸಾದರ ಮತ್ತು ಸೌಮ್ಯ ಪುತ್ರನ್ ರವರು ಆಯ್ಕೆಯಾಗಿದ್ದಾರೆ.* 2020 ನೇ ಸಾಲಿನ ಶಿಕ್ಷಣ ಕ್ಷೇತ್ರದ ಸಾಧನೆಗೆ 'ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ' ರವರ ಪ್ರಶಸ್ತಿಗೆ ಬಸವರಾಜ ಪಾಟೀಲ್ ಸೇಡಂ ಅವರನ್ನು ಆಯ್ಕೆ ಮಾಡಿದ್ದು, 2021 ನೇ ಸಾಲಿನ ಸಮಾಜ ಸೇವೆ ಕ್ಷೇತ್ರದಲ್ಲಿ ಬೆಂಗಳೂರಿನ 'ಸಂದ್ಯಾ ದೀಪ ಸಂಸ್ಥೆ' ಹಾಗೂ 2022 ನೇ ಸಾಲಿನ ವಚನ ಸಾಹಿತ್ಯ ಕ್ಷೇತ್ರದಲ್ಲಿ ಧಾರವಾಡದ ಬಸವರಾಜ ಸಾದರ ಅವರನ್ನು ಆಯ್ಕೆ ಮಾಡಲಾಗಿದೆ.* ವಿಶೇಷ ದೃಷ್ಟಿ ಚೇತನ ಲೇಖಕರಿಗಾಗಿ ಮೀಸಲಿರುವ 'ಡಾ ಎಚ್.ವಿಶ್ವನಾಥ್ ಮತ್ತು ಎಂ.ಎಸ್ ಇಂದಿರಾ ದತ್ತಿ' ಯವರ ಪ್ರಶಸ್ತಿಗೆ ಉಡುಪಿಯ ಸೌಮ್ಯ ಪುತ್ರನ್ ಆಯ್ಕೆಯಾಗಿದ್ದು, ಈ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ನೇತೃತ್ವದಲ್ಲಿ ಈ ಸಮಿತಿಯ ಮೂವರ ಆಯ್ಕೆ ನಡೆದಿದೆ ಎಂದು ತಿಳಿಸಿದ್ದಾರೆ.