* ದೇಶದ ಖ್ಯಾತ ಉದ್ಯಮಿ ಹಾಗೂ ಟಾಟಾ ಸನ್ಸ್‌ನ ಮಾಜಿ ಮುಖ್ಯಸ್ಥರಾದ 'ರತನ್‌ ಟಾಟಾ' ಇವರಿಗೆ "ಉದ್ಯೋಗ ರತ್ನ ಪ್ರಶಸ್ತಿ" ನೀಡುವುದಾಗಿ ಇತ್ತೀಚಿಗೆ ಮಹಾರಾಷ್ಟ್ರ  ಸರ್ಕಾರವು ಘೋಷಣೆ ಮಾಡಿದೆ. ಪ್ರಶಸ್ತಿಯ ಮೊದಲನೆ ಅವತರಣಿಕೆ ಇದಾಗಿದ್ದು, ಮಹಾರಾಷ್ಟ್ರದ  ಕಾರ್ಖಾನೆ ಸಚಿವರಾದ ಸಾವಂತ್‌ ಅವರು ವಿಧಾನ ಪರಿಷತ್‌ನಲ್ಲಿ ಈ ಕುರಿತು ಘೋಷಣೆ ಮಾಡಿದ್ದಾರೆ. * ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂದರೆ ಯುವ ಉದ್ಯಮಿ, ಮಹಿಳೆ ಹಾಗೂ ಮರಾಠಿ ಉದ್ಯಮಿಗಳಿಗೂ ‍ಪ್ರಶಸ್ತಿ ನೀಡಲಾಗುವುದು ಎಂದು ಉದಯ್ ಸಾಮ೦ತ್ ಅವರು ತಿಳಿಸಿದ್ದಾರೆ.* ‘ಪ್ರತಿಷ್ಠಿತ ವ್ಯಕ್ತಿಗಳಿಗೆ  ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡುವ ಹಾಗೆ, ರತನ್ ಟಾಟಾ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ’ ಎಂದು ಅವರು ಹೇಳಿದರು.* ರತನ್ ಟಾಟಾ ಅವರು ಉದ್ಯೋಗ ರತ್ನ ಪ್ರಶಸ್ತಿಯ ಮೊದಲ ಪುರಸ್ಕೃತರಾಗಿದ್ದಾರೆ.