* 2023ನೇ ಸಾಲಿನ ರಾಷ್ಟ್ರೀಯ ಹುಲಿ ಗಣತಿ ವರದಿ ಪ್ರಕಟಗೊಂಡಿದ್ದು,ಪ್ರತಿ 4 ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಸಲಾಗುತ್ತದೆ. ಈ ಬಾರಿ ಜಾಗತಿಕ ಹುಲಿ ದಿನದ ಅಂಗವಾಗಿ ಶನಿವಾರ(ಜುಲೈ 29) ಕೇಂದ್ರ ಸರ್ಕಾರ ಗಣತಿ ವಿವರ ಬಿಡುಗಡೆಗೊಳಿಸಿದೆ. * 2018ನೇ ಸಾಲಿನ ವರದಿಗೆ ಹೋಲಿಸಿದರೆ ಭಾರತದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ.ಭಾರತ ಒಟ್ಟು 3,682 ಹುಲಿಗಳಿಗೆ ಅವಾಸಸ್ಥಾನವಾಗಿದೆ.  * ಮಧ್ಯಪ್ರದೇಶ ದೇಶದಲ್ಲೇ ಅತೀ ಹೆಚ್ಚು 785 ಹುಲಿಗಳಿದ್ದು ಪ್ರಥಮ ಸ್ಥಾನದಲ್ಲಿದೆ , ಕರ್ನಾಟಕದಲ್ಲಿ 563 ಹುಲಿಗಳಿದ್ದು 2ನೇ ಸ್ಥಾನದಲ್ಲಿದೆ. ಮತ್ತು ಉತ್ತರಾಖಂಡದಲ್ಲಿ 550 ಹುಲಿಗಳಿದ್ದು ಮೂರನೇ ಸ್ಥಾನದಲ್ಲಿದೆ.* ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ. 75ರಷ್ಟು ಭಾರತದಲ್ಲಿವೆ.* ಉತ್ತರಾಖಂಡದ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ260 ಹುಲಿಗಳಿದ್ದು ಪ್ರಥಮ ಸ್ಥಾನ ಹೊಂದಿದೆ , ಕರ್ನಾಟಕದ ಬಂಡೀಪುರ ಅಭಯಾರಣ್ಯದಲ್ಲಿ191 ಹುಲಿಗಳಿದ್ದು 2ನೇ ಸ್ಥಾನದಲ್ಲಿದೆ , ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ 185 ಹುಲಿಗಳಿರುವುದು ಕಂಡು ಬಂದಿದೆ,