* ಕೃತಕ ಬುದ್ದಿಮತ್ತೆಯ(ಎಐ) ಮೊದಲ ವಿಶ್ವ ಸುಂದರಿ ಕಿರೀಟವನ್ನು ಮೊರೊಕ್ಕೊದ ಕಂಪ್ಯೂಟರ್ ರಚಿತ ಕೆನ್ಝಾಲೈಲಿ ಮುಡಿಗೇರಿಸಿಕೊಂಡಿದ್ದಾರೆ.* ಎಮಿಲಿ ಪೆಲೆಗ್ರಿನಿ ಮತ್ತು ಐತಾನಾ ಲೋಫೆಜ್ ಅವರನ್ನು ಹಿಂದಿಕ್ಕಿ ಕೊನೆಯದಾಗಿ ಕೆನ್ಝಾಲೈಲಿ ಎಐ ವಿಶ್ವ ಸುಂದರಿ ಪಟ್ಟವನ್ನು ಪಡೆದುಕೊಂಡಿದ್ದಾರೆ.* ಮುಖದಲ್ಲಿನ ಸ್ಥಿರತೆ, ಕೈಗಳು, ಕಣ್ಣುಗಳ ನೈಜತೆ ಮತ್ತು ಉಡುಗೆ ವಿಭಾಗದಲ್ಲಿ ಮುನ್ನಡೆ ಸಾಧಿಸಿದ್ಡೇ ಲೈಲಿಗೆ ವಿಶ್ವ ಕಿರೀಟ ಸಿಗಲು ಕಾರಣ ಎಂದು ತಿಳಿದು ಬಂದಿದೆ. ಪ್ರಪಂಚದ ನೈಜ ಸಮಸ್ಯೆಗಳಿಗೆ ಪರಿಹಾರವೇನು ಎಂಬ ವಿಚಾರದಲ್ಲಿ ಲೈಲಿ ವಿಚಾರಧಾರೆ ಅದ್ಭುತವಾಗಿತ್ತು.* ಮೊರಾಕೊದ ಹಿಜಾಬ್ ಧರಿಸಿದ ಕೆನ್ಝಾಲೈಲಿಯನ್ನು ಕಾಸಾಬ್ಲಾಂಕಾದ 40 ವರ್ಷದ ಮೆರಿಯಮ್ ಬೆಸ್ಸಾ ಅವರು ರಚಿಸಿದ್ದಾರೆ, ಅವರು ಮೊದಲ ಬಾರಿಗೆ ಅಂತಹ ಸ್ಪರ್ಧೆಯನ್ನು ಗೆದ್ದಿದ್ದಾರೆ ಮತ್ತು "ಮೊರಾಕೊವನ್ನು ಹೆಮ್ಮೆಯಿಂದ ಪ್ರತಿನಿಧಿಸಲು ಇದು ಒಂದು ಅವಕಾಶ" ಎಂದು ಹೇಳಿದರು. ಬಿಸ್ಸಾ ಅವರು Phoneix AI ನ CEO ಆಗಿದ್ದಾರೆ.* ಕೆನ್ಝಾಲೈಲಿಗೆ 5 ಸಾವಿರ ಅಮೇರಿಕನ್ ಡಾಲರ್ ನಗದು ಬಹುಮಾನ ಸಿಕ್ಕಿದೆ. ಇದು ಅವಳನ್ನು ರಚಿಸಿದ ಮಾನವ ತಾಂತ್ರಿಕ ಕಾರ್ಯನಿರ್ವಾಹಕರಾದ ಮೆರಿಯಮ್ ಬೆಸ್ಸಾ ಅವರಿಗೆ ನೇರವಾಗಿ ಹೋಗುತ್ತದೆ.* ಇನ್ನು ಭಾರತದ ಪರವಾಗಿ ಟಾಪ್ 10 ಸುಂದರಿಯರ ಸಾಲಿನಲ್ಲಿ ಝರಾ ಶತವತಿ ಕೂಡ ಭಾಘವಹಿಸಿದ್ದರು ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು.