* 2022ರ ವಿಶ್ವಕಪ್ ಫೈನಲಿಸ್ಟ್ ಫ್ರಾನ್ಸ್ ತಂಡವನ್ನು 2-1 ಅಂತರದಿಂದ ಸೋಲಿಸಿದ ಸ್ಪೇನ್ ತಂಡ ಯುರೋ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ.* ದಾಖಲೆಯ 4 ನೇ ಪ್ರಶಸ್ತಿಯ ಹಂಬಲದಲ್ಲಿರುವ  ಸ್ಪೇನ್ ತಂಡ ಯುರೋ UEFA ಪುಟ್ಬಾಲ್ ಟೂರ್ನಿಯಲ್ಲಿ 12 ವರ್ಷಗಳ ಬಳಿಕ ಫೈನಲ್ ಗೇರಿದೆ. * ರ್ಯಾಂಡಲ್ ಕೊಲೊ ಮುವಾನಿ ತನ್ನ ತಂಡಕ್ಕೆ ಮುನ್ನಡೆ ನೀಡಿದ್ದರಿಂದ ಫ್ರಾನ್ಸ್ ಕೇವಲ ಒಂಬತ್ತು ನಿಮಿಷಗಳ ಆರಂಭದಲ್ಲಿ ಆಘಾತಕಾರಿ ಮುನ್ನಡೆ ಸಾಧಿಸಿತು. ಆದರೆ ಲ್ಯಾಮಿನ್ ಯಮಲ್ ಮತ್ತು ಡ್ಯಾನಿ ಓಲ್ಮ ಅವರಿಂದ ನಾಲ್ಕು ನಿಮಿಷಗಳಲ್ಲಿ ಎರಡು ಗೋಲುಗಳು UEFA ಯುರೋ 2024 ರ ಫೈನಲ್‌ನಲ್ಲಿ ಸ್ಪೇನ್‌ನ ಸ್ಥಾನವನ್ನು ಭದ್ರಪಡಿಸಿದವು.* ಲ್ಯಾಮಿನ್ ಯಮಲ್ ಅದ್ಭುತ ಗೋಲಿನೊಂದಿಗೆ ಸ್ಪೇನ್ ತಂಡ ಸಮಬಲ ಸಾಧಿಸಲು ನೆರವಾದರು. ಜತೆಗೆ ಯೂರೊ ಟೂರ್ನಿಯಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ(16 ವರ್ಷ) ಎಂಬ ದಾಖಲೆ ನಿರ್ಮಿಸಿದರು. ಬ್ರೆಜಿಲ್ ನ ದಿಗ್ಗಜ ಪಿಲೆ(17 ವರ್ಷ) ಅವರ ಸಾಧನೆ ಮುರಿದರು. * ಮತ್ತೊಂದು ಸೆಮಿಫೈನಲ್ ನಲ್ಲಿ ಸೆಣೆಸುತ್ತಿರುವ ನೆದರ್ಲೆಂಡ್ಸ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಸ್ಪೇನ್ ಜುಲೈ 14 ರಂದು ಫೈನಲ್ ನಲ್ಲಿ ಎದುರಿಸಲಿದೆ.