Job Description: * ದೇಶದಲ್ಲೇ ಮೊದಲನೆ ಬಾರಿಗೆ ಕೇರಳ ರಾಜ್ಯವು ನೀರಿನ ಬಜೆಟ್ ಅಳವಡಿಸಿಕೊಂಡಿದೆ. ಹೇರಳವಾದ ನದಿಗಳು, ತೊರೆಗಳು, ಹಿನ್ನೀರು ಪ್ರದೇಶಗಳು ಮತ್ತು ಉತ್ತಮ ಪ್ರಮಾಣದ ಮಳೆಯು ಕೇರಳದ ಸೊಂಪಾದ ಹಸಿರಿಗೆ ಕೊಡುಗೆ ನೀಡುತ್ತದೆ. ಅವುಗಳಲ್ಲಿ ಹಲವು ಭಾಗಗಳು ಬೇಸಿಗೆಯಲ್ಲಿ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿವೆ ಹಾಗಾಗಿ ಈ ಕೇರಳ ರಾಜ್ಯವು ಈ ಕ್ರಮವನ್ನು ಕೈಗೊಂಡಿದೆ.* ರಾಜ್ಯದ 15 ಬ್ಲಾಕ್ ಪಂಚಾಯತ್‌ಗಳ 94 ಗ್ರಾಮ ಪಂಚಾಯತಿಗಳನ್ನು ಒಳಗೊಂಡ ಮೊದಲ ಹಂತದ ನೀರಿನ ಬಜೆಟ್‌ನ ವಿವರಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಏಪ್ರಿಲ್ 17 ರಂದು ಬಿಡುಗಡೆ ಮಾಡಿದರು.* ಅಂತಾರಾಷ್ಟ್ರೀಯ ಖ್ಯಾತಿಯ ಲಿಮ್ನಾಲಜಿಸ್ಟ್ ಮತ್ತು SCMS ವಾಟರ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ಸನ್ನಿ ಜಾರ್ಜ್ ರವರು 'ಕೊರತೆಯ ಸಮಸ್ಯೆಯಲ್ಲ, ಇದು ನಿರ್ವಹಣಾ ಸಮಸ್ಯೆಯಾಗಿದೆ. ಸಂಪನ್ಮೂಲವನ್ನು ನಿರ್ವಹಿಸಲು, ನೀವು ಮೊದಲು ಅದನ್ನು ಪ್ರಮಾಣೀಕರಿಸಬೇಕು. ಅದು ಯಾವುದೇ ಸಂಪನ್ಮೂಲವನ್ನು ನಿರ್ವಹಿಸುವ ಮೂಲ ತತ್ವವಾಗಿದೆ' ಎಂದು ಹೇಳಿದ್ದಾರೆ.