Job Description: * ಬೀಜ ಉತ್ಪಾದನೆ, ಗುಣಮಟ್ಟದ ಬೀಜ ಗುರುತಿಸುವಿಕೆ ಮತ್ತು ಬೀಜ ಪ್ರಮಾಣೀಕರಣದ ಸವಾಲುಗಳನ್ನು ಎದುರಿಸಲು SATHI (ಬೀಜ ಪತ್ತೆಹಚ್ಚುವಿಕೆ, ದೃಢೀಕರಣ ಮತ್ತು ಹೋಲಿಸ್ಟಿಕ್ ಇನ್ವೆಂಟರಿ) ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಏಪ್ರಿಲ್ 19 ರಂದು ಪ್ರಾರಂಭಿಸಿದರು.* ಈ ಪೋರ್ಟಲ್‌ ಅನ್ನು ಉತ್ತಮ್ ಬೀಜ್ – ಸಮೃದ್ಧ್ ಕಿಸಾನ್ ಎಂಬ ವಿಷಯದ ಮೇಲೆ ಅಭಿವೃದ್ಧಿ ಒಪಡಿಸಲಾಗಿದ್ದು, ಕೃಷಿಯಲ್ಲಿ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳು ಮತ್ತು ನೀರಾವರಿ ಪ್ರಮುಖ ಪಾತ್ರ ವಹಿಸುತ್ತದೆ. ಗುಣಮಟ್ಟದ ಅಥವಾ ನಕಲಿ ಬೀಜಗಳು ಕೃಷಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.