* ವಯಸ್ಸಾದಂತೆ ಅನಾರೋಗ್ಯ ಮತ್ತಿತರ ಸಮಸ್ಯೆಗಳು ಹೆಚ್ಚಿರುತ್ತವೆ. ಅದಕ್ಕೆ ಅನುಗುಣವಾಗಿ ಖರ್ಚು ವೆಚ್ಚವೂ ಅಧಿಕ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 80 ವರ್ಷ ವಯಸ್ಸು ದಾಟಿದ ಪಿಂಚಣಿ ಮೊತ್ತ ಹೆಚ್ಚಿಸಿದೆ.* ಕೇಂದ್ರದ ನಿವೃತ್ತ ಉದ್ಯೋಗಿಗಳಿಗೆ ನಿಯಮಿತ ಪಿಂಚಣಿ ಜೊತೆಗೆ ಸಹಾನುಭೂತಿಯ ಭತ್ಯೆ ಎಂದು ಕರೆಯಲ್ಪಡುವ ಹೆಚ್ಚುವರಿ ಭತ್ಯೆ ಕೂಡ ನೀಡಲಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಇತ್ತೀಚೆಗೆ ಈ ಹೆಚ್ಚುವರಿ ಪಿಂಚಣಿ ನೀಡುವ ನಿರ್ಧಾರ ಪ್ರಕಟಿಸಿದೆ.* ಇದು ಕೇಂದ್ರ ಸರ್ಕಾರದ ಸಿವಿಲ್ ಸರ್ವಿಸ್ ಹುದ್ದೆಗಳಿಂದ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವವರಿಗೆ ನೀಡಲಾಗಿರುವ ಗೈಡ್ಲೈನ್ಸ್ ಆಗಿದೆ.* ಸಿವಿಲ್ ಸರ್ವಿಸ್ನಿಂದ ನಿವೃತ್ತರಾಗಿ 80 ವರ್ಷ ವಯಸ್ಸು ಮುಟ್ಟಿದವರಿಗೆ ಹೆಚ್ಚುವರಿ ಪಿಂಚಣಿ ಅಥವಾ ಕಾಂಪ್ಯಾಶನೇಟ್ ಅಲೋಯನ್ಸ್ ನೀಡಲಾಗುತ್ತದೆ. ವಯಸ್ಸು ಹೆಚ್ಚಿದಂತೆಲ್ಲಾ ಈ ಹೆಚ್ಚುವರಿ ಪಿಂಚಣಿ ಮೊತ್ತ ಹೆಚ್ಚುತ್ತಾ ಹೋಗುತ್ತದೆ. ಮೂಲ ಪಿಂಚಣಿಯ ಶೇ. 20ರಿಂದ ಶೇ. 100ರವರೆಗೂ ಈ ವಿಶೇಷ ಭತ್ಯೆಯು ಪಿಂಚಣಿದಾರರಿಗೆ ಸಿಗುತ್ತದೆ.80ರಿಂದ 85 ವರ್ಷ ವಯಸ್ಸಿನ ಪಿಂಚಣಿದಾರರಿಗೆ: ಮೂಲ ಪಿಂಚಣಿಯ ಶೇ. 2085ರಿಂದ 90 ವರ್ಷ: ಶೇ. 30ರಷ್ಟು ಹೆಚ್ಚುವರಿ ಪಿಂಚಣಿ90ರಿಂದ 95 ವರ್ಷ ವಯಸ್ಸು: ಶೇ. 40ರಷ್ಟು ಹೆಚ್ಚುವರಿ ಪಿಂಚಣಿ95ರಿಂದ 100 ವರ್ಷ ವಯಸ್ಸು: ಶೇ. 50ರಷ್ಟು ಹೆಚ್ಚುವರಿ ಪಿಂಚಣಿ100 ವರ್ಷ ಮೇಲ್ಪಟ್ಟ ವಯಸ್ಸು: ಶೇ. 100ರಷ್ಟು ಹೆಚ್ಚುವರಿ ಪಿಂಚಣಿ* ಈ ಹೊಸ ಮಾರ್ಗಸೂಚಿಗಳ ಬಗ್ಗೆ ಪಿಂಚಣಿ ಇಲಾಖೆಯು ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ಪಿಂಚಣಿ ವಿತರಿಸುವ ಬ್ಯಾಂಕುಗಳಿಗೆ ಮಾಹಿತಿ ನೀಡಿದೆ.* ಪಿಂಚಣಿದಾರನು ಗೊತ್ತುಪಡಿಸಿದ ವಯಸ್ಸನ್ನು ತಲುಪಿದ ತಿಂಗಳ ಮೊದಲ ದಿನದಿಂದ ಹೆಚ್ಚುವರಿ ಪಿಂಚಣಿ ಅನ್ವಯವಾಗುತ್ತದೆ .* ಈ ಉಪಕ್ರಮವು ಹಿರಿಯ ನಾಗರಿಕರ ಕೊಡುಗೆಗಳನ್ನು ಗುರುತಿಸುತ್ತದೆ ಮತ್ತು ಅವರು ವಯಸ್ಸಾದಂತೆ ಅವರಿಗೆ ಗೌರವಯುತವಾದ ಜೀವನ ಮಟ್ಟವನ್ನು ಒದಗಿಸುವ ಗುರಿಯನ್ನು ಹೊಂದಿದೆ.