* ಕೈಗಾರಿಕೆಗಳು ಮತ್ತು ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಒಪ್ಪಂದಕ್ಕೆ ಭಾರತ ಮತ್ತು ಯುಎಇ ಅ.5 ರಂದು ಒಪ್ಪಂದಕ್ಕೆ ಸಹಿ ಹಾಕಿವೆ.* ಜಂಟಿ ನಿಧಿಗಳು ಮತ್ತು ಪರಸ್ಪರ ಪ್ರಯತ್ನಗಳಿಂದ ಪ್ರಯೋಜನ ಪಡೆಯುವ ಮೂಲಕ ಹೂಡಿಕೆಗಳು, ತಂತ್ರಜ್ಞಾನ ವರ್ಗಾವಣೆ ಮತ್ತು ಕೈಗಾರಿಕೆಗಳಲ್ಲಿ ಪ್ರಮುಖ ತಂತ್ರಜ್ಞಾನಗಳ ನಿಯೋಜನೆಯೊಂದಿಗೆ ಎರಡೂ ರಾಷ್ಟ್ರಗಳಲ್ಲಿ ಕೈಗಾರಿಕೆಗಳನ್ನು ಬಲಪಡಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ.* ಕೈಗಾರಿಕಾ ಮತ್ತು ಶೈಕ್ಷಣಿಕ ಸಹಯೋಗಗಳು, ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಗಳ ಹಂಚಿಕೊಳ್ಳುವಿಕೆ, ಪ್ರಮಾಣೀಕರಣ, ಮಾಪನ ಶಾಸ್ತ್ರ, ಅನುಸರಣೆ ಮೌಲ್ಯಮಾಪನ, ಮಾನ್ಯತೆ ಮತ್ತು `ಹಲಾಲ್' ಪ್ರಮಾಣೀಕರಣದ ಮೂಲಕ ಇದನ್ನು ಸಾಧಿಸಬಹುದಾಗಿದೆ.