* ಪ್ರತಿ ವರ್ಷ ಅಕ್ಟೋಬರ್ ಮೊದಲ ಶುಕ್ರವಾರದಂದು ವಿಶ್ವ ನಗು ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 6 ರಂದು ವಿಶ್ವ ನಗು ದಿನವನ್ನು ಆಚರಿಸಲಾಯಿತು.* ವಿಶ್ವ ನಗು ದಿನವನ್ನು ಪ್ರೀತಿಯ ನಗು ಮತ್ತು ದಯೆಯಿಂದ ವರ್ತಿಸುವುದನ್ನು ತೋರಿಸಲು ಆಚರಿಸಲಾಗುತ್ತದೆ. ನಗು ಮುಖದ ಚಿಹ್ನೆಯ ನಿಜವಾದ ಅರ್ಥವನ್ನು ಮರಳಿ ತರಲು ಈ ದಿನವನ್ನು ಘೋಷಿಸಲಾಗಿದೆ.* ಮೊದಲ ಬಾರಿಗೆ ಮೆಸಾಚುಸೆಟ್ಸ್‌ನಲ್ಲಿ ಕಲಾವಿದ ಹಾರ್ವೆ ಬಾಲ್‌ ಅವರು ಈ ದಿನವನ್ನು ಆರಂಭಿಸಲಾಗಿದ್ದು, ಈತ ಸ್ಮೈಲ್‌ ಫೇಸ್‌ ಅನ್ನು 1963ರಂದು ಬಿಡಿಸಿದರು, 1999ರಂದು ಮೊದಲ ಬಾರಿಗೆ ವಿಶ್ವ ನಗು ದಿನವನ್ನು ಆಚರಿಸಲಾಯಿತು.* ಹಾರ್ವೆ 2001 ರಲ್ಲಿ ಹಾರ್ವೆ ಬಾಲ್ ಅವರ ನಿಧನದ ನಂತರ ಅವರನ್ನು ಗೌರವಿಸಲು ಹಾರ್ವೆ ಬಾಲ್ ವರ್ಲ್ಡ್ ಸ್ಮೈಲ್ ಫೌಂಡೇಶನ್ ಅನ್ನು ಸ್ಥಾಪಿಸಲಾಯಿತು.* "ನಗುವಿನ ಮೂಲಕ ವಿಶ್ವ ಶಾಂತಿ" (World Peace Through Laughter) ಎಂಬುದು ವಿಶ್ವ ನಗು ದಿನದ 2023 ರ ಘೋಷವಾಕ್ಯವಾಗಿದೆ.