* ಅಕ್ಟೋಬರ್ 7 ರಂದು ನಡೆದ ಏಷ್ಯನ್ ಕ್ರೀಡಾಕೂಟದ ಹಾಕಿ ಫೈನಲ್‌ನಲ್ಲಿ ಹರ್ಮನ್‌ ಪ್ರೀತ್ ಸಿಂಗ್ ಅವರ ದಿಟ್ಟ ನಾಯಕತ್ವದ ನೆರವಿನಿಂದ ಭಾರತ ತಂಡ ಕಳೆದ ಸಲದ ಚಾಂಪಿಯನ್ ಜಪಾನ ತಂಡವನ್ನು 5-1 ಗೋಲುಗಳಿಂದ ಗೆಲುವು ಸಾಧಿಸಿತು.* ಹರ್ಮನ್‌ ಪ್ರೀತ 32ನೇ ಮತ್ತು 59ನೇ ನಿಮಿಷ ಎರಡು ಗೋಲುಗಳನ್ನು ಗಳಿಸಿದರು. ಅಮಿತ್ ರೋಹಿದಾಸ್ (36ನೇ ನಿಮಿಷ), ಮನ್‌ಪ್ರೀತ್‌ ಸಿಂಗ್ (25) ಮತ್ತು ಅಭಿಷೇಕ್ (18) ಉಳಿದ ಗೋಲುಗಳನ್ನು ಗಳಿಸಿ ಭಾರತಕ್ಕೆ ಅರ್ಹ ಗೆಲುವನ್ನು ಗಳಿಸಿಕೊಟ್ಟರು.