Job Description: * ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ - ಮಟ್ಟದ ಸಮೀಕ್ಷೆಯ (2020-21) ವರದಿ ಪ್ರಕಟವಾಗಿದೆ. ವರದಿಯ ಪ್ರಕಾರ ಉತ್ತರ ಪ್ರದೇಶವು ದೇಶದಲ್ಲಿಯೇ ಹೆಚ್ಚು ಕಾಲೇಜುಗಳನ್ನು ಹೊಂದಿರುವ ರಾಜ್ಯವಾಗಿದ್ದು ಒಟ್ಟು 8,114 ಕಾಲೇಜುಗಳಿವೆ ಹಾಗೂ ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ (4,532), ಮೂರನೇ ಸ್ಥಾನದಲ್ಲಿ ಕರ್ನಾಟಕ (4,233) ನಂತರದ ಸ್ಥಾನಗಳಲ್ಲಿ ರಾಜಸ್ಥಾನ, ತಮಿಳುನಾಡು, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಗುಜರಾತ್, ತೆಲಂಗಾಣ ಇದ್ದು, 10ನೇ ಸ್ಥಾನದಲ್ಲಿ ಕೇರಳ ಇದೆ ಎಂದು ವರದಿ ಹೇಳಿದೆ. * ಮೊದಲ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ ಲಕ್ಷ ಜನಸಂಖ್ಯೆಗೆ 32 ಕಾಲೇಜುಗಳಿದ್ದರೆ, ಮಹಾರಾಷ್ಟ್ರ ದಲ್ಲಿ 34 ಹಾಗೂ ಕರ್ನಾಟಕದಲ್ಲಿ 62 ಕಾಲೇಜುಗಳಿವೆ. ಶಿಕ್ಷಣ ಸಚಿವಾಲಯ ಈ ವರದಿಯನ್ನು ಬಿಡುಗಡೆ ತಿಳಿಸಿದೆ.