* ಕಾಡಿಚ್ಚುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಪೆಂಚ್ ಟೈಗರ್ ರಿಸರ್ವ್ ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅತ್ಯಾಧುನಿಕ ಪಿಟಿಝಡ್ (ಪ್ಯಾನ್ ಟಿಲ್ಟ್ ಝೂಮ್) ಕ್ಯಾಮೆರಾವನ್ನು ಸಮುದ್ರ ಮಟ್ಟದಿಂದ 540 ಮೀಟರ್ ಎತ್ತರದಲ್ಲಿರುವ ಮೀಸಲು ಪ್ರದೇಶದಲ್ಲಿ ಇರಿಸಲಾಗಿದೆ. ಈ ಕ್ಯಾಮೆರಾ ಸುತ್ತಲಿನ 15 ಕಿ.ಮೀ ಕಾಡಿನ ಮೇಲೆ ನಿಗಾವಹಿಸಲಿದೆ. ಕೋಲಿಟ್ಮಾರಾದಲ್ಲಿರುವ ವೆಸ್ಟ್ ಪೆಂಚ್ ವ್ಯಾಪ್ತಿಯ ಕಚೇರಿಯಲ್ಲಿ ಇದನ್ನು ನಿಯಂತ್ರಣ ಮಾಡಲಾಗುತ್ತದೆ.* ಈ ಎಐ ವ್ಯವಸ್ಥೆಯನ್ನು 'ಪಂತೆರಾ' ಎಂದು ಹೆಸರಿಸಲಾಗಿದ್ದು, ಕಾಡ್ಗಿಚ್ಚು ಸಂಭವಿಸುವ ಪ್ರದೇಶಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತದೆ. ಬೆಂಕಿ ಹೊತ್ತಿಕೊಳ್ಳುವ ಮೊದಲೇ ವಿವರಗಳನ್ನು ನೀಡುತ್ತದೆ. ಈ* ಈ ತಂತ್ರಜ್ಞಾನವು  ಕಾಡ್ಗಿಚ್ಚು ಪತ್ತೆಗೆ ಮತ್ತು ಅನಗತ್ಯ ಸೈರನ್ ಗಳಿಗೆ ಕಡಿವಾಣ ಹಾಕಲು ನೆರವಾಗುತ್ತದೆ. ಮಳೆ, ಗಾಳಿಯ ವೇಗ, ಹವಾಮಾನದಲ್ಲಿ ಆಗುವ ದೊಡ್ಡ ಬದಲಾವಣೆ ಬಗ್ಗೆ ಮಾಹಿತಿ ಒದಗಿಸುತ್ತದೆ.* ಈ ವ್ಯವಸ್ಥೆಯನ್ನು ಪೆಂಚ್ ಟೈಗರ್ ರಿಸರ್ವ್, ಸತ್ಪುಡಾ ಫೌಂಡೇಶನ್, ಬ್ರೆಜಿಲಿಯನ್ ಕಂಪನಿ ಮತ್ತು ಅಮೆರಿಕದಲ್ಲಿರುವ ಸ್ಟೇಲ್ ಇಂಕ್‌ನ ಫಾರೆಸ್ಟ್ ಫೈರ್ ಟಿಕ್ ಕಂಪನಿಗಳು ಅಭಿವೃದ್ಧಿಪಡಿಸಿದ್ದಾರೆ.