* ಕೇರಳಕ್ಕೆ ಮಾನ್ಸೂನ್‌ನ ಆಗಮನವಾಗಲಿದ್ದು, ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಜೂನ್‌ ಮೊದಲ ವಾರದಲ್ಲಿ ಮೇ 31 ಅಥವಾ ಜೂನ್‌ 1ಕ್ಕೆ ಕೇರಳ ರಾಜ್ಯಕ್ಕೆ ಮುಂಗಾರು ಮಳೆ ಆಗಮನ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಕೇಂದ್ರ ತಿಳಿಸಿದೆ. * ಮುಂದಿನ ಐದು ದಿನಗಳು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಪ್ರವೇಶಿಸುವ ಸಾಧ್ಯತೆ ಇದೆ. ಜೂನ್‌ 5 ರಂದು ಬೆಂಗಳೂರು ಹವಾಮಾನ ಇಲಾಖೆ ಕೇಂದ್ರ ತಿಳಿಸಿದೆ. * ಮೇ 27 ರ ಹವಾಮಾನ ಇಲಾಖೆಯ ವರದಿಯ ಪ್ರಕಾರ ಯಾದಗಿರಿಯ ನಾರಾಯಣಪುರ, ಇಳಕಲ್‌, ಕೆಂಭಾವಿಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ತಾವರಗೇರ, ಸುರಪುರ ಹಾಗೂ ತಾಳಿಕೋಟೆಯಲ್ಲಿ ತಲಾ 4, ಬೇವೂರು, ಕಕ್ಕೇರಿ, ಕುಷ್ಟಗಿಯಲ್ಲಿ ತಲಾ 3, ಲಿಂಗಸುಗೂರು, ಗಂಗಾವತಿ, ವಿಜಯಪುರ, ರಾಯಚೂರು, ರಾಯಚೂರಿನ ಜಾಲಹಳ್ಳಿ, ಮುನಿರಾಬಾದ್‌, ದೇವದುರ್ಗ, ಗಬ್ಬೂರು, ಯಲಬುರ್ಗಾದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. * ಉಳಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ 41.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.* ಮೇ 31 (ಶುಕ್ರವಾರ) ರಂದು ಕೇರಳಕ್ಕೆ ಮಾನ್ಸೂನ್ ಆಗಮವಾಗಲಿದೆ ನಂತರ ರಾಜ್ಯವನ್ನು ಪ್ರವೇಶವಾಗಲು ಒಂದು ವಾರ ಬೇಕು. ಭಾರತೀಯ ಹವಾಮಾನ ಇಲಾಖೆಯ (ಬೆಂಗಳೂರು) ವಿಜ್ಞಾನಿ ಮತ್ತು ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ತಿಳಿಸಿದ್ದಾರೆ.* ನೈಋತ್ಯ ಮಾನ್ಸೂನ್ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂತಿಮ ವರದಿಯನ್ನು ಬಿಡುಗಡೆ ಮಾಡಿದ್ದು, ಜೂನ್ ನಿಂದ ಮತ್ತು ಸೆಪ್ಟೆಂಬರ್‌ವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಕರ್ನಾಟಕದಲ್ಲಿಯೂ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ತಿಳಿಸಿದ್ದಾರೆ.