* ಭಾರತೀಯ ಪರ್ವತಾರೋಹಿ ಸತ್ಯದೀಪ್‌ ಗುಪ್ತಾ ಅವರು ಒಂದು ಋತುಮಾನದಲ್ಲಿ ಎರಡು ಬಾರಿಗೆ ಮೌಂಟ್‌ ಎವರೆಸ್ಟ್‌ ಮತ್ತು ಮೌಂಟ್‌ ಲೋಟ್ಸೆ ಎಂಬ ಎರಡು ಪರ್ವತಗಳನ್ನು ಏರುವ ಮೂಲಕ ಇತಿಹಾಸ ಸೃಷ್ಟಿಸಿದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಪಯೋನಿಯರ್ ಅಡ್ವೆಂಚರ್ ಎಕ್ಸ್‌ಪೆಡಿಶನ್ ಸಂಸ್ಥೆಯ ಪ್ರಕಾರ ಗುಪ್ತಾ ಅವರು ಮೇ 27. 2024 (ಸೋಮವಾರ) ರಂದು ಮಧ್ಯಾಹ್ನ 8,516-ಮೀಟರ್ ಎತ್ತರದ ಮೌಂಟ್ ಲೊಟ್ಸೆ ಪರ್ವತವನ್ನು ಏರಿದ್ದಾರೆ  ಮತ್ತು 8,849-ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತವನ್ನು ಅದೇ ಮಧ್ಯರಾತ್ರಿ 12:45 ಕ್ಕೆ ಏರಿದರು.* ಗುಪ್ತಾ ಅವರು ಮೌಂಟ್ ಎವರೆಸ್ಟ್‌ನಿಂದ ಮೌಂಟ್ ಲೊಟ್ಸೆಗೆ 11 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಸ್ಥಾಪಿಸಿದರು.* ಗುಪ್ತಾ ಅವರು ಈ ಹಿಂದೆ ಮೇ 21 (ಮಂಗಳವಾರ) ರಂದು ಮೌಂಟ್ ಎವರೆಸ್ಟ್ ಮತ್ತು ಮೇ 22 (ಬುಧವಾರ) ರಂದು ಮೌಂಟ್ ಲೋಟ್ಸೆ ಎಂಬ ಎರೆಡು ಪರ್ವತವನ್ನು ಏರಿದ್ದಾರೆ. ಮೊದಲ ಪರ್ವತಾರೋಹಿ ಕೂಡಾ ಹೆಗ್ಗಳಿಕೆ ಪಡೆದಿದ್ದಾರೆ.