* 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಶ್ರೀನಗರದ ದಾಲ್ ಸರೋವರ್ ತಟದಲ್ಲಿ ಭಾರಿ ಸಿದ್ದತೆ ನಡೆದಿದೆ. * ಜೂನ್ 21ರ ಶುಕ್ರವಾರದಂದು ಶ್ರೀನಗರದ ವಿಶ್ವ ಪ್ರಸಿದ್ಧ ದಾಲ್ ಸರೋವರದ ತಟದಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದು ಬಹು ಹಂತದ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. * ಅಂತಾರಾಷ್ಟ್ರೀಯ ಯೋಗ ದಿನದ 2024 ರ ಥೀಮ್ "ಸ್ವಯಂ ಮತ್ತು ಸಮಾಜದ ಒಳಿತಿಗೆ ಯೋಗ" ಎಂಬುದು ಥೀಮ್ ಆಗಿದೆ.* ಜಮ್ಮು-ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊದಿಗೆ ದಾಲ್‌ ಸರೋವರ ಬಳಿ ಸುಮಾರು 7 ಸಾವಿರ ಮಂದಿಯೊಂದಿಗೆ ಜೂನ್.21ರಂದು ಯೋಗಾಸನ ಪ್ರದರ್ಶನ ನೀಡುವುದು ಜಮ್ಮು-ಕಾಶ್ಮೀರಕ್ಕೆ ಹೆಮ್ಮೆಯ ವಿಷಯವಾಗಿದೆ.* ಪ್ರತಿಯೊಬ್ಬರೂ ಯೋಗ ಮಾಡುವ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡು ಆ ಮೂಲಕ ಸಮುದಾಯವನ್ನು ಪ್ರೇರೇಪಿಸಬೇಕು ಎಂಬುದು ಇದರ ಉದ್ದೇಶವಾಗಿದೆ," ಎಂದು ಆಯುಷ್‌ ಇಲಾಖೆಯ ಸಚಿವ ಪ್ರತಾಪ್‌ ರಾವ್‌ ಜಾಧವ್‌ ಅವರು ತಿಳಿಸಿದರು.